ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಸಚಿವರ ಕ್ಷೇತ್ರದಲ್ಲಿ ಅಸಹಾಯಕತೆಯಿಂದ ನಿಂತ ವೃದ್ಧೆ

ನವಲಗುಂದ : ಸತತವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಈಗಾಗಲೇ ಗ್ರಾಮಗಳ ಭಾಗದ ಜನರ ಜೀವನ ತತ್ತರಿಸಿ ಹೋಗಿದೆ. ಇದಕ್ಕೆ ಸಾಕ್ಷಿಯೆಂಬಂತೆ ನೆನ್ನೆಯಿಂದ ಸುರಿಯುತ್ತಿರುವ ಮಳೆಗೆ ವೃದ್ಧೆಯೊಬ್ಬರು ಅಸಹಾಯಕತೆಯಿಂದ ಬೀದಿಯಲ್ಲಿ ನಿಂತ ದೃಶ್ಯವೊಂದು ಮನಕಲುಕುವಂತಿದೆ.

ಹೌದು ಈ ದುಸ್ಥಿತಿ ಬಂದೊದಗಿರೋದು ನವಲಗುಂದ ತಾಲ್ಲೂಕಿನ ಕಾಲವಾಡ ಗ್ರಾಮದಲ್ಲಿ ಎಂಬುದು ನಿಜಕ್ಕೂ ಬೇಸರ ಸಂಗತಿ, ಯಾಕಂದರೆ ಇದು ಸಚಿವರ ಕ್ಷೇತ್ರ ಇಲ್ಲಿ ಇಂತಹ ಪರಿಸ್ಥಿತಿ ಇರೋದು ಈಗ ಜನರಲ್ಲಿ ಸಾಕಷ್ಟು ಬೇಸರ ಮೂಡಿಸುತ್ತಿದೆ. ಸುರಿದ ಮಳೆಗೆ ನೀರು ಮನೆಯೊಳಕ್ಕೆ ನುಗ್ಗಿದೆ. ಹೀಗಾಗಿ ವೃದ್ಧೆ ಮನೆಯಿಂದ ಹೊರ ಬರುವಂತಾಗಿದೆ. ಆದರೆ ಈ ಗ್ರಾಮದಲ್ಲಿ ರಸ್ತೆಯಲ್ಲೂ ಮೊಣಕಾಲವರೆಗೆ ನೀರು ನಿಂತಿರೋದು ಈಗ ವೃದ್ಧೆಯ ಸಂಕಷ್ಟಕ್ಕೆ ಕಾರಣವಾಗಿದೆ. ವೃದ್ಧೆಗೆ ಈಗ ಮನೆಯಲ್ಲೂ ಇರಲಾಗದೆ, ರಸ್ತೆಯ ಮೇಲು ನಿಲ್ಲಲಾಗದೆ ಅಸಹಾಯಕತೆಯಲ್ಲಿ ಆಡನ್ನು ಕೈಯಲ್ಲಿ ಹಿಡಿದು ನಿಂತಿದ್ದು, ಹಲವಾರು ವರ್ಷಗಳಿಂದ ಇದೇ ರೀತಿ

ಪರಿಸ್ಥಿತಿ ಇದ್ದರೂ ಯಾವೊಬ್ಬ ಅಧಿಕಾರಿಯಿಂದ ಪರಿಹಾರ ಸಿಕ್ಕಿಲ್ಲ ಎಂದು ತನ್ನ ಅಳಲನ್ನು ತೋಡಿಕೊಂಡಿದ್ದಾಳೆ. ಈ ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜನರ ಸಮಸ್ಯೆಗೆ ಸ್ಪಂದಿಸಬೇಕಿದೆ.

Edited By : Shivu K
Kshetra Samachara

Kshetra Samachara

20/11/2021 01:59 pm

Cinque Terre

25.27 K

Cinque Terre

1

ಸಂಬಂಧಿತ ಸುದ್ದಿ