ಕುಂದಗೋಳ : ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಶಿರೂರು ಬ್ರಿಡ್ಜ್ ನೆಲಕ್ಕಪ್ಪಳಿಸಿದ ವಿಚಾರ ಹಾಗೂ ಜನರಿಗೆ ನಿತ್ಯ ಸಾರಿಗೆ ತಾಪತ್ರಯದ ಕಷ್ಟ ಎಲ್ಲರಿಗೂ ಗೊತ್ತಿರುವ ಸಂಗತಿ.
ಇದೀಗ ಈ ಹುಬ್ಬಳ್ಳಿ ಲಕ್ಷ್ಮೇಶ್ವರ ಶಿರೂರು ಬ್ರಿಡ್ಜ್'ಗೆ ಮಾರಕವಾಗಿವೆ ಎಂದು ಅದೆಷ್ಟೋ ಅನಾಥ ಮರಗಳಿಗೆ ಕೊಡಲಿ ಪೆಟ್ಟು ಬಿದ್ದಿದೆ.
ಕಳೆದ ಸೋಮವಾರ ಸರಿ ಸುಮಾರು ಹತ್ತು ವರ್ಷಗಳಿಂದ ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಬಳಿ ಬೆಳೆದಿದ್ದ ಅನಾಥ ಬೇವಿನ ಮರಗಳಿಗೆ ಬ್ರಿಡ್ಜ್'ಗೆ ಹಾನಿ ಮಾಡುತ್ತಿವೆ ಮತ್ತು ಕಾಮಗಾರಿಗೆ ಅಡ್ಡಿಯಾಗಿವೆ ಎಂದು ಲೋಕೋಪಯೋಗಿ ಇಲಾಖೆ ಮೇಲಾಧಿಕಾರಿಗಳು ಕೊಡಲಿ ಪೆಟ್ಟು ನೀಡಿದ್ದು ದಾರಿಹೋಕರಿಗೆ ಆಶ್ರಯದ ಜೊತೆ ನೆರಳು ನೀಡುತ್ತಿದ್ದ ಮರಗಳ ಮಾರಣಹೋಮವಾಗಿದೆ.
ಇನ್ನು ಅಧಿಕಾರಿಗಳು ಈ ಬೃಹತ್ ಪ್ರಮಾಣದ ಮರ ಕತ್ತರಿಸಿರುವುದಕ್ಕೆ ಸಾರ್ವಜನಿಕರು ಏನಿದು ಕರ್ತವ್ಯ ? ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಅದೇನೆ ಇರಲಿ ಅಧಿಕಾರಿಗಳೇ ನೀವೂ ಬ್ರಿಡ್ಜ್ ಮಾರಕವಾದ ಮರ ಕತ್ತರಿಸಿದರೆ ರಸ್ತೆ ಪಕ್ಕ ಪುನಃ ಅದೇರೀತಿ ಮರ ನೆಟ್ಟು ಪೋಷಿಸುವ ಕೆಲಸ ಮಾಡಿ ಎಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.
Kshetra Samachara
05/11/2021 12:38 pm