ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ತಡರಾತ್ರಿ ಚಿತ್ತಿ ಸುರಿದ ರಭಸಕ್ಕೆ ನೆಲಕ್ಕಪ್ಪಳಿಸಿದ ಮನೆ

ಕುಂದಗೋಳ : ತಾಲೂಕಿನ ಸಂಶಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ಮಾದೇವಿ ಶೇಖಪ್ಪ ಕ್ಯಾಲಕೊಂಡ್ ಎಂಬುವವರ ಮನೆಯ ಗೋಡೆ ಕುಸಿದು ಬಿದ್ದು ಮನೆ ಸಂಪೂರ್ಣ ಜಲಾವೃತವಾಗಿದೆ ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ.

ನಿನ್ನೆ ತಡರಾತ್ರಿ ಸುರಿದ ಚಿತ್ತಿ ಮಳೆಯ ರಭಸಕ್ಕೆ ಮಾದೇವಿ ಶೇಖಪ್ಪ ಕ್ಯಾಲಕೊಂಡ್ ಎಂಬುವವರ ಮನೆಗೆ ಏಕಾಏಕಿ ನೀರು ನುಗ್ಗಿದ ಪರಿಣಾಮ ಮನೆಯ ವಸ್ತುಗಳು ನೀರಿನಲ್ಲಿ ಮುಳುಗಿದ್ದರೇ ಮನೆಯ ಒಂದು ಭಾಗದ ಗೋಡೆ ನೆಲಕ್ಕಪ್ಪಳಿಸಿದೆ.

ಸಧ್ಯ ಬಿದ್ದಿರುವ ಗೋಡೆ ಹಾಗೂ ಮನೆಯ ಸಾಮಾನುಗಳನ್ನು ಕುಟುಂಬಸ್ಥರು ಎತ್ತಿಡುತ್ತಿದ್ದು ಸರ್ಕಾರ ಜನಪ್ರತಿನಿಧಿಗಳು ಅಧಿಕಾರಿಗಳು ಗಮನಿಸಿ ಏನಾದ್ರೂ ಸಹಾಯ ಮಾಡಿ ಎನ್ನುತ್ತಿದ್ದಾರೆ.

Edited By : Shivu K
Kshetra Samachara

Kshetra Samachara

13/10/2021 11:47 am

Cinque Terre

23.88 K

Cinque Terre

0

ಸಂಬಂಧಿತ ಸುದ್ದಿ