ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಅವಳಿ ಕರುಗಳಿಗೆ ಜನ್ಮ ನೀಡಿದ ಲಕ್ಷ್ಮೀ ಕುಟುಂಬದಲ್ಲಿ ಸಂತಸ !

ಕುಂದಗೋಳ : ಹಸುವೊಂದು ಅವಳಿ ಕರುಗಳಿಗೆ ಜನ್ಮ ನೀಡಿದ ಅಪರೂಪದ ಘಟನೆ ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ಸೋಮವಾರ ತಡರಾತ್ರಿಯಲ್ಲಿ ನಡೆದಿದ್ದು ಹಸು ಕರು ಎರೆಡು ಆರೋಗ್ಯವಾಗಿವೆ.

ಸಂಶಿ ಗ್ರಾಮದ ನಿವೃತ್ತ ಕೃಷಿ ಅಧಿಕಾರಿ ಎನ್.ಎಫ್.ಮೇವುಂಡಿಮಠ ಎಂಬುವವರ ಸಾಕಿದ ಲಕ್ಷ್ಮೀ ಎಂಬ ಹೆಸರಿನ ಎಚ್‌ಎಫ್ ತಳಿಯ ಹಸುವು ನಿನ್ನೆ ರಾತ್ರಿ 10-30 ಕ್ಕೆ ಗಂಡು ಕರು ವೊಂದಕ್ಕೆ ಜನ್ಮ ನೀಡಿದೆ ಅದಾದ ಬಳಿಕ ತಡರಾತ್ರಿ 1 ಗಂಟೆ ಸುಮಾರಿಗೆ ಮತ್ತೋಂದು ಗಂಡು ಕರುವಿಗೆ ಜನ್ಮ ನೀಡಿದ್ದು ಎರೆಡು ಕರುಗಳು ಲವಲವಿಕೆಯಿಂದ ಇವೆ.

ಈಗಾಗಲೇ ಅವಳಿ ಕರುಗಳನ್ನು ನೋಡಲು ಜನ ಮನೆ ಕಡೆ ಧಾವಿಸುತ್ತಿದ್ದು ಯಾವುದೇ ಅಪಾಯಕ್ಕೆ ಒಳಗಾಗದೆ ಅವಳಿ ಕರುವಿಗೆ ಜನ್ಮ ನೀಡಿದ ಹಸು ಲಕ್ಷ್ಮೀ ಮೇಲೆ ಕುಟುಂಬದವರ ಪ್ರೀತಿ ಅತಿಯಾಗಿದೆ.

Edited By : Shivu K
Kshetra Samachara

Kshetra Samachara

12/10/2021 03:57 pm

Cinque Terre

22.91 K

Cinque Terre

1

ಸಂಬಂಧಿತ ಸುದ್ದಿ