ಧಾರವಾಡ : ಪೇಡಾ ನಗರಿಗೂ ಇಂದು ವಾಯು ಭಾರ ಕುಸಿತದ ಬಿಸಿ ತಟ್ಟಿದ್ದು, ಧಾರವಾಡದಲ್ಲಿ ಒಂದು ಗಂಟೆಗೂ ಅಧಿಕ ಕಾಲ ಮಳೆರಾಯ ತನ್ನ ಅರ್ಭಟ ಜೋರಾಗಿದೆ. ಇಂದು ಮುಂಜಾನೆಯಿಂದಲ್ಲೇ ನಗರದಾದ್ಯಂತ ಮೋಡ ಕವಿದ ವಾತಾವರಣವಿದ್ದು ಸಂಜೆವೇಳೆಗೆ ಗುಡುಗು ಸಹಿತ ಭಾರೀ ಮಳೆಯಾಗಿದ್ದು ಕೆಲಕಾಲ ಜನಜೀವನ ಅಸ್ಯವ್ಯಸ್ತಗೊಂಡಿದೆ.
ಕಳೆದ ಮೂರು ದಿನಗಳಿಂದ ರಾತ್ರಿ ವೇಳೆ ನಗರದಲ್ಲಿ ಮಳೆಯಾಗುತ್ತಾ ಬಂದಿದ್ದು, ಇಂದು ಸಂಜೆ ಸುರಿದ ಗುಡುಗು ಸಹಿತ ಮಳೆಯಿಂದಾಗಿ ನಗರದ ತಗ್ಗು ಪ್ರದೇಶ ನಿವಾಸಿಗಳಿಗೆ ಆತಂಕ ಎದುರಾಗಿದೆ.
ಮುಂಜಾನೆ ವಿವಿಧ ಕೆಲಸಗಳ ನಿಮಿತ್ತ ಹೊರಗಡೆ ಹೋಗಿದ್ದ ಜನರು ಮರಳಿ ಮನೆ ಸೇರುವಷ್ಟರಲ್ಲಿ ಹೈರಾಣಾಗಿದ್ದಂತೂ ಸುಳ್ಳಲ್ಲ.
Kshetra Samachara
06/10/2021 07:20 pm