ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವರಗುಡಿಹಾಳ ಮತ್ತು ಬೂದನಗುಡ್ಡದ ಸಮೀಪ ಚಿರತೆ ಪ್ರತ್ಯಕ್ಷ....!

ಹುಬ್ಬಳ್ಳಿ:ಧಾರವಾಡ ಜಿಲ್ಲೆಯಲ್ಲಿ ಚಿರತೆ ಹಾವಳಿ ಇನ್ನು ಮುಂದುವರೆದಿದೆ. ಧಾರವಾಡದ ಕವಲಗೇರಿಯಲ್ಲಿ ಚಿರತರ ಬೋನಿಗೆ ಬಿದಿದೆ. ಆದ್ರೆ ಇದೀಗ ಹುಬ್ಬಳ್ಳಿ ಹಾಗೂ ಕಲಘಟಗಿ ತಾಲೂಕಿನಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದೆ. ಕಲಘಟಗಿಯ ದೇವರ ಗುಡಿಹಾಳ ಮತ್ತು ಬೂದನಗುಡ್ಡದ ಸಮೀಪ ದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು ಅರಣ್ಯ ಇಲಾಖೆ ಇದನ್ನು ಖಚಿತಪಡಿಸಿದೆ.

ಹುಬ್ಬಳ್ಳಿ ತಾಲೂಕಿನ ದೇವರಗುಡುಹಾಳ, ಕಲಘಟಗಿ ತಾಲೂಕಿನ ಬೂದನಗುಡ್ಡದಲ್ಲಿ ನಿನ್ನೆ ತಡರಾತ್ರಿ ಸುತ್ತಾಡಿದೆ. ಕಳೆದ ಒಂದೂವರೆ ತಿಂಗಳುಗಳ ಹಿಂದೆ ಅಂಚಟಗೇರಿ ಬಳಿ ಕಾಣಿಸಿಕೊಂಡಿದ್ದ ಚಿರತೆ ಇದೀಗ ಮತ್ತೆ ಪ್ರತ್ಯಕ್ಷವಾಗಿದೆ‌.

ಇದು ಈ ಹಿಂದೆ ಕಾಣಿಸಿಕೊಂಡಿದ್ದ ಚಿರತೆಯೋ ಅಥವಾ ಬೇರೆಯದೋ ಎಂಬ ಬಗ್ಗೆ ಅರಣ್ಯ ಇಲಾಖೆ ತಲೆಕೆಡಿಸಿಕೊಂಡಿದೆ. ಇನ್ನು ನಗರದ ನೃತಪತುಂಬ ಬೆಟ್ಟದಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆ ಮತ್ತೆ ಕಂಡಿಲ್ಲ. ಹೀಗಾಗಿ ಇದೇ ಚಿರತೆ ಅಲ್ಲಿ ಹೋಗಿದೆಯಾ ಎಂಬ ಬಗ್ಗೆಯೂ ಅರಣ್ಯ ಇಲಾಖೆ ಪರಶೀಲಿಸುತ್ತಿದ್ದು, ಚಿರತೆ ಸೆರೆಗೆ ಅರಣ್ಯ ಇಲಾಖೆಯಿಂದ ಬೋನು ಇಡಲಾಗಿದೆ. ಸಾರ್ವಜನಿಕರು ಮನೆಯಿಂದ ಹೊರ ಬಾರದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

30/09/2021 11:44 am

Cinque Terre

29.11 K

Cinque Terre

14

ಸಂಬಂಧಿತ ಸುದ್ದಿ