ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಕೊನೆಗೂ ಬೋನಿಗೆ ಬಿದ್ದ ಚಿರತೆ

ಧಾರವಾಡ: ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದಲ್ಲಿ ಕಣ್ಣಾಮುಚ್ಚಾಲೆ ಆಟ ಆಡಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ.

ಕವಲಗೇರಿ ಗ್ರಾಮದ ಶಿವಪ್ಪ ಉಪ್ಪಾರ ಎಂಬುವವರ ಕಬ್ಬಿನ ಗದ್ದೆಯಲ್ಲಿ ಅವಿತು ಕುಳಿತಿದ್ದ ಚಿರತೆ ಬೋನಿಗೆ ಬಿದ್ದಿದೆ.

ಕಳೆದ ಕೆಲವು ದಿನಗಳಿಂದ ಅರಣ್ಯ ಇಲಾಖೆಯವರ ನಿದ್ದೆಗೆಡಿಸಿದ್ದ ಈ ಚಿರತೆ ತಾನಾಗಿಯೇ ಬೋನಿಗೆ ಬಿದ್ದಿದೆ. ಚಿರತೆ ಸೆರೆಗಾಗಿ ಬೋನು ಇಡಲಾಗಿತ್ತು. ಅರಣ್ಯ ಇಲಾಖೆಯವರ ಈ ತಂತ್ರ ಸಫಲವಾಗಿದೆ. ಅಂದಾಜು ಮೂರರಿಂದ ನಾಲ್ಕು ವರ್ಷದ ಗಂಡು ಚಿರತೆ ಇದಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ್ ತಿಳಿಸಿದ್ದಾರೆ.

Edited By : Shivu K
Kshetra Samachara

Kshetra Samachara

26/09/2021 08:56 am

Cinque Terre

119.85 K

Cinque Terre

48

ಸಂಬಂಧಿತ ಸುದ್ದಿ