ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮುಂದುವರಿದ ಕಾರ್ಯಾಚರಣೆ;ಆಪರೇಷನ್ ಚೀತಾ.!

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಚಿರತೆ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಅರಣ್ಯ ಇಲಾಖೆ ಸಾಕಷ್ಟು ಕಾರ್ಯಾಚರಣೆ ಕೈಗೊಂಡಿದ್ದು, ನಿನ್ನೆಯಿಂದ ಕೇಂದ್ರೀಯ ವಿದ್ಯಾಲಯದ ಹಳೆಯ ಕಟ್ಟಡ ತೆರವು ಕಾರ್ಯ ಆರಂಭವಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸ್ಥಳದಲ್ಲಿಯೇ ಬಿಡು ಬಿಟ್ಟಿದ್ದಾರೆ.

ಹೌದು..ಅಪರೇಷನ್ ಚೀತಾ ಕಾರ್ಯಾಚರಣೆಯೂ ಆರಂಭವಾಗಿದ್ದು, ನೃಪತುಂಗ ಬೆಟ್ಟದ ಬಳಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬಿಡು ಬಿಟ್ಟಿದ್ದಾರೆ. ಡಿ.ಎಫ್.ಒ ಯಶಪಾಲ ಕ್ಷೀರಸಾಗರ ನೇತೃತ್ವದಲ್ಲಿ ಕಾರ್ಯಾಚರಣೆ ಮುಂದುವರೆದಿದೆ. ರಾತ್ರಿ ವೇಳೆ ಕಂಡು ಕಾಣದಂತೆ ಮಾಯವಾಗ್ತಿರೋ ಚಿರತೆ ಕಾಟ ಸ್ಥಳೀಯರಿಗೆ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗೆ ತಲೆನೋವಾಗಿದೆ.

ಇನ್ನೂ ಹುಬ್ಬಳ್ಳಿಯ ನೃಪತುಂಗ ಬೆಟ್ಟ, ರಾಜ್ ನಗರ, ಶಿರಡಿ ನಗರ ಮತ್ತಿತರ ಕಡೆ ಕಾಣಿಸಿಕೊಳ್ಳುತ್ತಿರುವ ಚಿರತೆಯಿಂದ ಕೇಂದ್ರೀಯ ವಿದ್ಯಾಲಯ ಕಟ್ಟಡ ತೆರವು ಆರಂಭವಾಗಿದೆ. ಈಗಾಗಲೇ ಜೆಸಿಬಿಗಳ ಮೂಲಕ ತೆರವು ಕಾರ್ಯಾಚರಣೆ ನಡೆದಿದ್ದು, ಮುನ್ನಚ್ಚರಿಕೆ ವಹಿಸುವಂತೆ ನೃಪತುಂಗ ಬೆಟ್ಟದ ಸುತ್ತಲಿನ ಪ್ರದೇಶಗಳ ಜನತೆಗೆ ಸೂಚನೆ ನೀಡಲಾಗಿದೆ.

Edited By : Shivu K
Kshetra Samachara

Kshetra Samachara

22/09/2021 02:22 pm

Cinque Terre

100.07 K

Cinque Terre

6

ಸಂಬಂಧಿತ ಸುದ್ದಿ