ಕುಂದಗೋಳ : ಮೇಯಲು ಹೋದ ಹಸುವೊಂದು ಶೌಚಲಯದ ಚೇಂಬರ್'ನಲ್ಲಿ ಬಿದ್ದು ಪರದಾಡಿದ ಘಟನೆ ಇಂದು ಮಧ್ಯಾಹ್ನದ ವೇಳೆ ಕುಂದಗೋಳ ಪಟ್ಟಣದಲ್ಲಿ ನಡೆದಿದೆ.
ಎಂದಿನಂತೆ ಮೇಯಲು ಬಂದಿದ್ದ ಶಿವಾನಂದ ಹೊಂಬಳ ಎಂಬುವವರಿಗೆ ಸೇರಿದ ಹಸು ಖಾಸಗಿ ಶಾಲೆಯೊಂದರ ಕಾಂಪೌಂಡ್ ಒಳಗೆ ಮೇಯುತ್ತಾ ಸಾಗಿ ಶಾಲಾ ಶೌಚಾಲಯದ ಚೇಂಬರ್ ಮೇಲೆ ಕಾಲಿಟ್ಟು ಒಳಗೆ ಬಿದ್ದು ಒದ್ದಾಡತೊಡಗಿದೆ. ತಕ್ಷಣ ಪರಿಸ್ಥಿತಿ ಗಮನಿಸಿದ ಸ್ಥಳೀಯರು ಅಗ್ನಿಶಾಮಕ ಠಾಣೆಗೆ ಮಾಹಿತಿ ತಲುಪಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಠಾಣಾ ಅಧಿಕಾರಿಗಳು ಒಂದು ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಶೌಚಾಲಯದ ಚೇಂಬರ್'ನಲ್ಲಿ ಬಿದ್ದಿದ್ದ ಹಸುವನ್ನು ಸುರಕ್ಷಿತವಾಗಿ ಮೇಲೆತ್ತಿದ್ದಾರೆ.
Kshetra Samachara
17/08/2021 10:10 pm