ಕಲಘಟಗಿ: ತಾಲೂಕಿನ ಬಮ್ಮಿಗಟ್ಟಿ ಗ್ರಾಮದಲ್ಲಿ ನಾಗರ ಪಂಚಮಿಯ ಹಬ್ಬದ ದಿನವೇ ಮನೆಗೆ ಬಂದಿದ್ದ ನಾಗರ ಹಾವನ್ನು ಹಿಡಿದು ರಕ್ಷಣೆ ಮಾಡಿರುವ ಘಟನೆ ಗುರುವಾರ ಸಂಜೆ ಜರುಗಿದೆ.
ಕಲಘಟಗಿ ತಾಲೂಕಿನ ಬಮ್ಮಿಗಟ್ಟಿಯ ಸೋಮಣ್ಣ ಕಮಡೊಳ್ಳಿ ಎಂಬವರ ಮನೆಯೂಳಗೆ ನುಗ್ಗಿತ್ತು. ನಾಗರಾ ಹಾವು ಕಂಡು ಭಯಗೊಂಡು ಮನೆಯವರು ಕಲಘಟಗಿ ಪಟ್ಟಣದ ಹಾವು ರಕ್ಷಕ ಪ್ರಸಾದ್ ಗೊಂದಕರ ಅವರಿಗೆ ಕರೆ ಮಾಡಿದ್ದು ಸ್ಥಳಕ್ಕೆ ಆಗಮಿಸಿದ ಪ್ರಸಾದ್ ಕೈ ಯಿಂದಲೇ ನಾಗರಹಾವು ಹಿಡಿದು ರಕ್ಷಣೆ ಮಾಡಿದ್ದಾರೆ.ನಾಗರ ಪಂಚಮಿ ಹಬ್ಬದಂದೇ ನಾಗರಹಾವು ಕಂಡು ಬಂದಿರವುದು ಮನೆಯವರಿಗೆ ಅಚ್ಚರಿ ಮೂಡಿಸಿದೆ.
ಹಾವು ರಕ್ಷಕ ಪ್ರಸಾದ್ ಗೊಂದಕರ ಕಳೆದ ಹಲವು ವರ್ಷಗಳಿಂದ ಎಂತಹದ್ದೇ ವಿಷಕಾರಿ ಹಾವು ಇದ್ದರು ತಕ್ಷಣ ಬಂದು ಹಾವುಗಳನ್ನು ರಕ್ಷಿಸುತ್ತಿದ್ದಾರೆ ಇವರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Kshetra Samachara
12/08/2021 09:47 pm