ಕುಂದಗೋಳ : ಮಂಗಗಳ ದಾಳಿಯಿಂದ ಎರೆಡು ಜನರಿಗೆ ತೀವ್ರವಾದ ಗಾಯ ರಕ್ತಸ್ರಾವವಾದ ಘಟನೆ ರಾಮನಕೊಪ್ಪ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಹೌದು ! ಮಂಗಗಳ ಹಿಂಡಿನ ಸಲಗವೊಂದು ಏಕಾಏಕಿ ರಾಮನಕೊಪ್ಪ ಗ್ರಾಮದ ಪಕ್ಕಿರಪ್ಪ ಜಠಾರ, ಹಾಗೂ ರಾಜೇಸಾಬ ನಧಾಪ್ ಎಂಬುವವರ ಮೇಲೆ ಎರಗಿ ಪರಚಿದೆ. ಪಕ್ಕಿರಪ್ಪ ಜಠಾರ ಎಂಬುವವರಿಗೆ ತೀವ್ರವಾದ ಗಾಯವಾದರೆ, ರಾಜೇಸಾಬ ನಧಾಪ್ ಎಂಬುವವರಿಗೆ ಮಂಗ ಮಾಡಿದ ಗಾಯಕ್ಕೆ ಆರು ಹೊಲಿಗೆ ಬಿದ್ದಿವೆ.
ಈ ಬಗ್ಗೆ ಗ್ರಾಮಸ್ಥರು ವನ್ಯಜೀವಿ ಸಂರಕ್ಷಕ ಅಡಿವೆಪ್ಪ ತಳವಾರನನ್ನು ಸ್ಥಳಕ್ಕೆ ಕರೆಸಿ ಮಂಗನನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಸತತ ಮಂಗಗಳ ಹಾವಳಿಗೆ ಬೇಸತ್ತ ಜನರು ಅರಣ್ಯ ಇಲಾಖೆಯನ್ನ ದೋಷಿಸುತ್ತಾ, ಪರಿಸ್ಥಿತಿ ಹೀಗೆ ಮುಂದುವರೆದರೆ ಮಕ್ಕಳು ಮರಿ ಪಾಡೇನು ? ಎಂದು ಆಡಳಿತ ವ್ಯವಸ್ಥೆ ಪ್ರಶ್ನಿಸಿದ್ದಾರೆ.
Kshetra Samachara
25/01/2021 04:00 pm