ಧಾರವಾಡ: ತಾಲೂಕಿನ ಬೆನಕನಕಟ್ಟಿ ಗ್ರಾಮದ ಜಮೀನೊಂದರಲ್ಲಿ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿ ಮಾಡಿದೆ.
ಬೆನಕನಕಟ್ಟಿ ಗ್ರಾಮದ ಹೊಲವೊಂದರಲ್ಲಿರುವ ಇಟ್ಟಂಗಿ ಭಟ್ಟಿಯಲ್ಲಿ ಚಿರತೆ ಅಲೆದಾಡಿದ್ದು, ಅದರ ಹೆಜ್ಜೆ ಗುರುತು ಹಸಿ ಇಟ್ಟಂಗಿಯ ಮೇಲೆ ಮೂಡಿದೆ.
ಗ್ರಾಮಸ್ಥರು ಇದನ್ನು ಕಂಡು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದು, ಚಿರತೆಯ ಹೆಜ್ಜೆ ಗುರುತು ಬೆನ್ನು ಹತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿಗೆ ಚಿರತೆ ಇದುವರೆಗೂ ಕಂಡಿಲ್ಲ. ಗ್ರಾಮಸ್ಥರು ಜಾಗರೂಕರಾಗಿರುವಂತೆ ಅರಣ್ಯ ಇಲಾಖೆಯವರು ಬೆನಕನಕಟ್ಟಿ ಗ್ರಾಮಸ್ಥರಿಗೆ ಧೈರ್ಯ ಹೇಳಿದ್ದಾರೆ.
Kshetra Samachara
24/01/2021 06:59 pm