ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ವಿಜೃಂಭಣೆಯ ಸೀಗೆ ಹುಣ್ಣಿಮೆಗೆ ವರುಣ ಬ್ರೇಕ್!- ಸಿಂಪಲ್ ಆಚರಣೆ

ಕುಂದಗೋಳ : ರೈತಾಪಿ ಜನರ ಹಿಗ್ಗು, ಸಂತೋಷಕ್ಕೆ ಕಾರಣವಾಗಿ ಬಂಧು ಬಾಂಧವರನ್ನೂ ಕರೆದು ಆಚರಿಸಬೇಕಿದ್ದ ಸೀಗೆ ಹುಣ್ಣಿಮೆ ಮಳೆಯ ಪರಿಣಾಮ ಈ ವರ್ಷ ರೈತಾಪಿ ಜನರ ಸಾಂಕೇತಿಕ ಆಚರಣೆಗೆ ಮಾತ್ರ ಸಾಕ್ಷಿಯಾದಂತೆ ಕಂಡು ಬಂದಿತು.

ಕುಂದಗೋಳ ತಾಲೂಕಿನ ಎಲ್ಲೆಡೆ ರೈತಾಪಿ ಜನರ ಜಮೀನುಗಳಿಗೆ ತೆರಳಿ ಪೂಜೆ ಸಲ್ಲಿಸಲು ಕ್ಷಣ ಕಾಲ ಬಿಡುವು ಕೊಡದೆ ನಿರಂತರ ಸುರಿಯುತ್ತಿರುವ ಮಳೆಯ ಆಟಾಟೋಪಕ್ಕೆ ಸಿಲುಕಿದ ರೈತರು, ಈ ಬಾರಿ ವಿಜೃಂಭಣೆಯ ಸೀಗೆ ಹುಣ್ಣಿಮೆ ಬದಲಾಗಿ ಪೂಜೆ, ನೈವೇದ್ಯ, ಚರಗ ಚೆಲ್ಲಲು ಮಾತ್ರ ಸಾಧ್ಯವಾಗಿದ್ದು, ವಿಜೃಂಭಣೆಯ ಖುಷಿಯ ಕ್ಷಣಗಳು ದೂರವಾಗಿವೆ.

ಪ್ರಸ್ತುತ ವರ್ಷ ಎಡೆಬಿಡದೆ ಸುರಿದ ಮಳೆಯಲ್ಲಿ ರೈತಾಪಿ ಕುಟುಂಬದವರು ಕೆಲವೇ ಕೆಲವರು ಮಾತ್ರ ಹೊಲಕ್ಕೆ ಹೋಗಿ ಪೂಜೆ ಸಲ್ಲಿಸಿ ಸಾಂಪ್ರದಾಯಿಕ ಆಚರಣೆ ಮಾಡಿದ್ದಾರೆ.

ಒಟ್ಟಾರೆ ಮಾನ್ಸೂನ್ ಏರುಪೇರಿನಿಂದಾಗಿ ಸುರಿಯುತ್ತಿರುವ ಮಳೆ ರೈತಾಪಿ ಜನರ ಬೆಳೆಯಷ್ಟೇ ಅಲ್ಲದೆ, ವಿಜೃಂಭಣೆಯ ಹಬ್ಬದ ಆನಂದವನ್ನು ಕಡಿಮೆ ಮಾಡಿದೆ.

-ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್

Edited By : Shivu K
Kshetra Samachara

Kshetra Samachara

18/10/2024 08:37 am

Cinque Terre

6.79 K

Cinque Terre

0

ಸಂಬಂಧಿತ ಸುದ್ದಿ