ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಬೆಣ್ಣೆ ಹಳ್ಳದ ಪ್ರವಾಹ ! ಹಂಚಿನಾಳ ಗ್ರಾಮಸ್ಥರಲ್ಲಿ ಆತಂಕ

ಕುಂದಗೋಳ : ಧಾರಾಕಾರ ಮಳೆಯ ರಭಸಕ್ಕೆ ಹಂಚಿನಾಳ ಗ್ರಾಮಕ್ಕೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ‌. ಹೌದು ! ಪ್ರತಿ ವರ್ಷ ಅತ್ಯಧಿಕ ಮಳೆ ಸುರಿದಲ್ಲಿ ಅಕ್ಷರಶಃ ಹಂಚಿನಾಳ ಜನರ ಬದುಕು ಅವ್ಯವಸ್ಥೆಗೆ ಸಿಲುಕುತ್ತಲೇ ಸಾಗಿ ಈ ವರ್ಷದ ಧಾರಾಕಾರ ಮಳೆಗೆ ಪುನಃ ಹಂಚಿನಾಳ ಗ್ರಾಮದ ಬೀದಿ ಬೀದಿಗಳು ಜಲಾವೃತವಾಗಿ ಮನೆಗಳಿಗೆ ನೀರು ನುಗ್ಗುವ ಆತಂಕ ಸೃಷ್ಟಿಯಾಗಿದೆ.

ಇನ್ನೂ ಹಳ್ಳಿಗರು ಕಳೆದ ಹಲವು ವರ್ಷಗಳಿಂದ ಈ ಅವ್ಯವಸ್ಥೆಗೆ ರೋಸಿ ಹೋಗಿ ಮಳೆಗಾಲದ ಪರಿಸ್ಥಿತಿ ಸಂದರ್ಭದಲ್ಲಿ ತಮ್ಮ ಸಮಸ್ಯೆಗೆ ಸ್ಪಂದನೆ ಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.

ಬಹುತೇಕ ಬೆಣ್ಣೆಹಳ್ಳದ ಹರಿವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಹಂಚಿನಾಳ ಗ್ರಾಮದ ಜನತೆ ರಕ್ಷಣೆ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಬೆಣ್ಣೆ ಹಳ್ಳದ ಹೂಳೆತ್ತಿರಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ವರುಣ ದೇವನ ಅಟ್ಟಹಾಸಕ್ಕೆ ಅಕ್ಷರಶಃ ಬೆಣ್ಣೆ ಹಳ್ಳದ ಅಂಚಿನ ಹಳ್ಳಿಗರ ಬದುಕು ನಲುಗುತ್ತಲಿದ್ದು ಸ್ಥಳೀಯ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಅವರತ್ತ ಧಾವಿಸಬೇಕಿದೆ.

ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್, ಕುಂದಗೋಳ

Edited By : Vinayak Patil
Kshetra Samachara

Kshetra Samachara

17/10/2024 04:36 pm

Cinque Terre

29.76 K

Cinque Terre

0

ಸಂಬಂಧಿತ ಸುದ್ದಿ