ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹಂಚಿನಾಳ ಗ್ರಾಮಸ್ಥರ ಸಂಕಷ್ಟ ಹೇಳತೀರದು, ಜನಪ್ರತಿನಿಧಿಗಳೇ ಕಣ್ಣು ಬಿಟ್ಟು ನೋಡಿ ಇಲ್ಲಿನ ಸಮಸ್ಯೆ..!

ಹುಬ್ಬಳ್ಳಿ: ಅದು ಕುಂದಗೋಳ ತಾಲೂಕಿನ ಪುಟ್ಟ ಗ್ರಾಮ. ಆ ಗ್ರಾಮದಲ್ಲಿ ಜನರಿಗೆ ಮಳೆ ಬಂದರೇ ಖುಷಿಯಾಗುತ್ತದೆಯೋ ಇಲ್ಲವೋ..? ಅಕ್ಷರಶಃ ಕಣ್ಣೀರಂತೂ ಹಾಕಿಸಿಯೇ ಹೋಗುತ್ತದೆ. ಹಾಗಿದ್ದರೇ ಏನೆಲ್ಲಾ ಸಮಸ್ಯೆ ಇಲ್ಲಿದೆ ಅಂತ ನಿಮ್ಮ ಪಬ್ಲಿಕ್ ನೆಕ್ಸ್ಟ್ ಬಿಚ್ಚಿಡುತ್ತಿದೆ ನೋಡಿ..

ಮನೆ ಮನೆಗೆ ನುಗ್ಗುವ ನೀರು, ಮನೆಯ ಅಂಗಳ ಮಾತ್ರವಲ್ಲದೆ ಊರಿಗೆ ಊರೇ ಕೆರೆಯಂತಾಗಿರುವ ಈ ಒಂದು ಗ್ರಾಮ ಕುಂದಗೋಳ ತಾಲೂಕಿನ ಹಂಚಿನಾಳ ಗ್ರಾಮ. ಹೌದು..ಈ ಗ್ರಾಮದ ಜನರ ಕಷ್ಟ ಹೇಳ ತೀರದಾಗಿದೆ. ಹಂಚಿನಾಳ ಗ್ರಾಮದ ದಲಿತ ಕೇರಿ ಮಾದರ ಓಣಿ ಪರಿಸ್ಥಿತಿಯನ್ನು ನೋಡಿದರೇ ಎಂತವರಿಗೂ ಕಣ್ಣೀರು ಬರುವುದಂತೂ ಸತ್ಯ. ಈಗಾಗಲೇ ಸುಮಾರು ವರ್ಷಗಳಿಂದ ಇಲ್ಲಿನ ಜನರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡು ಜೀವನ ನಡೆಸುತ್ತಿದ್ದು, ಯಾವುದೇ ಅಧಿಕಾರಿಗಳಾಗಳಲಿ, ಜಿಲ್ಲಾಡಳಿತವಾಗಲಿ ಈ ಬಗ್ಗೆ ಕಾಳಜಿ ವಹಿಸದೇ ಇರುವುದು ಇಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ವರುಣನ ಆರ್ಭಟಕ್ಕೆ ಜನಜೀವನ ತತ್ತರಿಸಿ ಹೋಗಿದೆ. ಆದರೆ ಈ ಗ್ರಾಮದ ಜನರನ್ನು ನರಕಕ್ಕೆ ದೂಡಿರುವುದು ನಿಜಕ್ಕೂ ಚಿಂತಾಜನಕ ಸಂಗತಿಯಾಗಿದೆ. ಒಂದು ಹೊತ್ತಿನ ಊಟಕ್ಕೂ ಇಲ್ಲಿನ ಜನರು ಪರದಾಡುವಂತಾಗಿದೆ. ಕುಡಿಯುವ ನೀರನ್ನು ತರಲು ಕೂಡ ಇಲ್ಲಿ ಮಳೆಯ ನೀರಿನಿಂದ ಕೆರೆಯಾಗಿರುವಂತ ಪರಿಸ್ಥಿತಿಯಲ್ಲಿಯೇ ಸಾಹಸ ಮಾಡಬೇಕಾಗಿದೆ. ಈ ಬಗ್ಗೆ ಜಿಲ್ಲಾಡಳಿತ, ಜನಪ್ರತಿನಿಧಿಗಳು ಸೂಕ್ತ ಕ್ರಮಗಳನ್ನು ಜರುಗಿಸಿ ಜನರ ಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡಬೇಕಿದೆ.

-ಮಲ್ಲೇಶ್ ಸೂರಣಗಿ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

17/10/2024 05:01 pm

Cinque Terre

36.11 K

Cinque Terre

1

ಸಂಬಂಧಿತ ಸುದ್ದಿ