ಕಲಘಟಗಿ:ತಾಲೂಕಿನ ಗುಡ್ಡದ ಹುಲಿಕಟ್ಟಿಯಲ್ಲಿ ದನದ ಕೊಟ್ಟಿಗೆಗೆ ಬೆಂಕಿ ಬಿದ್ದ ಪರಿಣಾಮ ಮೂರು ಹಸುಗಳು ಸಜೀವ ದಹನವಾದ ಘಟನೆ ಸೋಮವಾರ ಸಂಭವಿಸಿದೆ. ಗುಡ್ಡದ ಹುಲಿಕಟ್ಟಿ ಗ್ರಾಮದ ರೈತರಾದ ನೀಲಕಂಠಗೌಡ ಪಾಟೀಲ ಎಂಬುವವರಿಗೆ ಸೇರಿದ ಗ್ರಾಮದ ಹೊರ ವಲಯದಲ್ಲಿನ ದನದ ಕೊಟ್ಟಿಗೆಗೆ ರಾತ್ರಿ ವೇಳೆ ಯಾರು ಇಲ್ಲದ ಸಮಯ ಕೊಟ್ಟಿಗೆಗೆ ಬೆಂಕಿ ಬಿದ್ದಿದೆ.ಬೆಂಕಿಯ ಕೆನ್ನಾಲಿಗೆ ಇಡಿ ಕೂಟ್ಟಿಗೆ ಆವರಿಸಿದ ಪರಿಣಾಮ ದನದ ಕೊಟ್ಟಿಗೆಯಲಿ ಕಟ್ಟಲಾದ ಮೂರು ಹಸುಗಳು ತಪ್ಪಿಸಿಕೊಳ್ಳಲಾಗದೇ ಸಜೀವ ದಹನವಾಗಿವೆ ಹಾಗೂ ಲಕ್ಷಾಂತರ ರೂಪಾಯಿ ವೆಚ್ಚದ ವಸ್ತುಗಳು ಬೆಂಕಿಗೆ ಸುಟ್ಟ ಕರಕಲಾಗಿವೆ.ಬೆಂಕಿಯನ್ನು ಯಾರಾದರು ದುಷ್ಕರ್ಮಿಗಳು ಹಚ್ಚಿದರೆ ಅಥಾವಾ ಆಕಸ್ಮಿಕ ಬೆಂಕಿ ಬಿದ್ದಿದೆಯೇ ಎಂಬುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬರ ಬೇಕಿದೆ.ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
13/10/2020 11:13 am