ಧಾರವಾಡ: ಸ್ವರ ಮಾಂತ್ರಿಕ.. ಸಂಗೀತ ಸರಸ್ವತಿ ಪುತ್ರ.. ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಸಾವಿಗೆ ಕೋಟ್ಯಾಂತರ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ.
ಭೂಲೋಕದಲ್ಲಿ ಸಂಗೀತ ಸುಧೆ ಹರಿಸಿ, ಸೂರ್ಯ, ಚಂದ್ರರಿರುವವರೆಗೂ ಸಂಗೀತಾಸಕ್ತರ ಹಸಿವು ನೀಗಿಸಿದ ಎಸ್ಪಿಬಿ ದೇವರಿಗೂ ಇಷ್ಟವಾದರು ಎಂದು ಕಾಣುತ್ತದೆ.
ಹೀಗಾಗಿಯೇ ಭೂಲೋಕದಲ್ಲಿ ಸಂಗೀತ ಸುಧೆ ಹರಿಸಿದ್ದು ಸಾಕು ದೇವಲೋಕದಲ್ಲೂ ನಿನ್ನ ಕಂಠ ಸಿರಿ ಕೇಳಲು ದೇವಾನುದೇವತೆಗಳೇ ಕಾಯುತ್ತಿದ್ದಾರೆ ಬಾ ಎಂದು ಆ ದೇವರು ಎಸ್ಪಿಬಿಯವರನ್ನು ತನ್ನ ಬಳಿ ಕರೆದುಕೊಂಡಿದ್ದಾನೆ ಎಂದು ಕಾಣುತ್ತದೆ.
ಸ್ವರ ಮಾಂತ್ರಿಕನನ್ನು ಕಳೆದುಕೊಂಡ ಮಳೆಯೂ ಕೂಡ ನಿನ್ನೆ ರಾತ್ರಿಯಿಂದಲೇ ಬಿಕ್ಕಿ ಬಿಕ್ಕಿ ಅಳುತ್ತಿದೆ. ಅವರ ಸಾವು ಮಳೆಗೂ ಇಷ್ಟವಾಗಲಿಲ್ಲ ಎಂದು ಕಾಣುತ್ತಿದೆ.
ಸಂಗೀತ ಲೋಕದ ದಿಗ್ಗಜ, ಬಹುಭಾಷಾ ಹಿನ್ನೆಲೆ ಗಾಯಕನ ಸಾವಿನಿಂದ ಇಡೀ ದೇಶವೇ ಮಮ್ಮಲ ಮರುಗುವಂತಾಗಿದೆ.
ವರುಣ ದೇವ ಕೂಡ ಎಸ್ಪಿಬಿಯನ್ನು ಕಳೆದುಕೊಂಡು ಅನಾತವಾದೆವು ಎಂದು ರಾತ್ರಿಯಿಂದ ಬಿಟ್ಟೂ ಬಿಡದೇ ಬಿಕ್ಕಿ ಬಿಕ್ಕಿ ಅತ್ತು ಅಶ್ರುತರ್ಪಣ ಸುರಿಸುತ್ತಿದ್ದಾನೆ.
Kshetra Samachara
26/09/2020 11:30 am