ವರದಿ: ಮಲ್ಲಿಕಾರ್ಜುನ ಪುರದನಗೌಡರ
ಕಲಘಟಗಿ:ಪಟ್ಟಣದ ವಲಯ ಅರಣ್ಯಾಧಿಕಾರಿಗಳ ಕಚೇರಿಯ ಸುತ್ತಲಿನ ತಡೆ ಗೋಡೆಯ ಮೇಲೆ ವನ್ಯಜೀವಿಗಳ ಚಿತ್ರಕಲೆಗಳನ್ನು ಬಿಡಿಸಲಾಗಿದ್ದು,ಗಮನ ಸೆಳೆಯುತ್ತಿದೆ.
ಪಟ್ಟಣದ ಹುಬ್ಬಳ್ಳಿ ಕಾರವಾರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಅರಣ್ಯ ಇಲಾಖೆಯ ಕಚೇರಿಯ ಸುತ್ತ ಹೊಸ ಕಾಂಪೌಂಡ್ ಕಟ್ಟಲಾಗಿದ್ದು,ಇದರ ಮೇಲೆ ಪಟ್ಟಣದ ಕಲಾವಿದರಾದ ತಿಪ್ಪಣ್ಣ ಕುರಗುಂದ ಅವರು ತಮ್ಮ ಕುಂಚದ ಮೂಲಕ ಜಿಂಕೆ,ಆನೆ,ಕೃಷ್ಣ ಮೃಗ,ಹಾರ್ನ್ ಬಿಲ್ ಪಕ್ಷಿ ಮುಂತಾದ ವನ್ಯಜೀವಿಗಳ ಚಿತ್ರ ಬಿಡಿಸಿರುವುದು ಪಟ್ಟಣದ ಅಂದ ಹೆಚ್ಚಿಸಿದೆ.ವಲಯ ಅರಣ್ಯಾಧಿಕಾರಿಗಳಾದ ಶ್ರೀಕಾಂತ ಪಾಟೀಲ ಅವರು ವಿಶೇಷ ಆಸಕ್ತಿ ವಹಿಸಿ ಕಚೇರಿಯ ಗೋಡೆಗಳ ಅಂದ ಹೆಚ್ಚಿಸಲು ಮುಂದಾಗಿರುವುದು ನಾಗರಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.
ಅಲ್ಲದೆ ಕಲ್ಲಾಪುರ ಸಸ್ಯಪಾಲನಾ ಕೇಂದ್ರದಲ್ಲಿಯೂ ಪುಣ್ಯ ಕೋಟಿಯ ಕಥೆ ಹಾಗೂ ಜಿರಾಫೆ,ಜಿಬ್ರಾ, ಚಿರನಾಯಿ,ಹುಲಿ,ಸಿಂಹ,ಚಿರತೆ,ತೋಳ, ನರಿ ಮುಂತಾದ ವನ್ಯಜೀವಿಗಳ ಗೋಡೆ ಚಿತ್ರಗಳು ಸುಂದರವಾಗಿ ಮೂಡಿಬಂದಿವೆ.
Kshetra Samachara
07/12/2020 08:53 pm