ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಊರೊಳಗಿನ ಮಠದ ಆವರಣಕ್ಕೆ ನುಗ್ಗಿ ರಕ್ಷಣೆಯಾಯ್ತು "ಉಡ"

ಕುಂದಗೋಳ : ತಾಲೂಕಿನ ರಾಮನಕೊಪ್ಪ ಗ್ರಾಮದ ಕಾಡ ಸಿದ್ಧಪ್ಪಜ್ಜನವರ ಮಠದ ಆವರಣದಲ್ಲಿ ನಿನ್ನೆ ಬೆಳಂ ಬೆಳಿಗ್ಗೆ ಉಡ ಕಾಣಿಸಿಕೊಂಡು ಸ್ಥಳೀಯರಲ್ಲಿ ಭಯ ಹುಟ್ಟಿಸಿದೆ. ಅಳಿವಿನಂಚಿನಲ್ಲಿರುವ ಪ್ರಾಣಿಯಾದ ಉಡವನ್ನು ಸಂರಕ್ಷಣೆ ಮಾಡಿ ಕಾಡಿಗೆ ಬಿಡಲಾಯಿತು.

ಆಹಾರ ಹುಡುಕುತ್ತಾ ಗ್ರಾಮದೇಡೆಗೆ ಬಂದ ಉಡವು ಸುಸ್ತಿನಿಂದ ಬಳಲಿ ಸಿದ್ಧಪ್ಪಜ್ಜನವರ ಮಠದ ಆವರಣದಲ್ಲಿ ಇರಿಸಲಾಗಿದ್ದ ಕಟ್ಟಿಗೆಗಳ ಕೆಳಗೆ ಅವಿತುಕೊಂಡಿದ್ದು, ಈ ಉಡವನ್ನು ನೋಡಿದ ಸ್ಥಳೀಯರು ವನ್ಯ ಜೀವಿಗಳ ಸಂರಕ್ಷಕ ಅಡಿವೆಪ್ಪ ತಳವಾರಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಗ್ರಾಮಸ್ಥರ ಸಹಕಾರದಲ್ಲಿ ಉಡವನ್ನು ಹಿಡಿದ ಅಡಿವೆಪ್ಪ ತಳವಾರ ಹತ್ತಿರದ ಕಾಡಿಗೆ ಬಿಟ್ಟು ಮಾನವೀಯತೆ ಮೆರೆದಿದ್ದಾರೆ.

Edited By : Manjunath H D
Kshetra Samachara

Kshetra Samachara

06/12/2020 09:42 pm

Cinque Terre

36.39 K

Cinque Terre

5

ಸಂಬಂಧಿತ ಸುದ್ದಿ