ಕುಂದಗೋಳ : ಸಾಮಾನ್ಯವಾಗಿ ನಾವು ನಾವೇಲ್ಲಾ ಕೋಳಿ ಜಗಳ ನೋಡಿರುತ್ತೇವೆ, ಒಂದನ್ನೊಂದು ಸೆಣಸುವ ಈ ಕೋಳಿಗಳ ಜಗಳ ಈ ಹಿಂದೆ ಹೆಚ್ಚಿನ ಜನಪ್ರೀಯತೆ ಗಳಿಸಿತ್ತು.
ಆದ್ರೇ ಅಂತಹ ಜನಪ್ರೀಯತೆ ಈಗಿಲ್ಲಾ ಬಿಡಿ, ಆದ್ರೇ ಇಲ್ಲೊಂದು ಕೋಳಿ ನಾಯಿ ಜಗಳ ನೋಡಿದ್ರೇ ನೀವು ಕ್ಷಣಕಾಲ ಆಶ್ಚರ್ಯವಾಗ್ತಿರಾ.
ಹೌದು ! ಇದೋ ಕುಂದಗೋಳ ತಾಲೂಕಿನ ಅಲ್ಲಾಪುರ ಗ್ರಾಮದ ಈರಣ್ಣ ಕುಬಿಹಾಳ ಎಂಬಾತ ಸಾಕಿರುವ ಈ ಕೋಳಿ ನಾಯಿಗಳ ಅನ್ಯೋನ್ಯತೆಯ ಜಗಳದಲ್ಲಿ ನಿತ್ಯ ಕೋಳಿ ಹುಂಜವೇ ಗೆಲ್ಲತ್ತೇ, ಈ ನಾಯಿ ಅನ್ಯೋನ್ಯತೆ ದೃಷ್ಟಿಯಿಂದ ಕೋಳಿ ತನ್ನ ಬಾಯಲ್ಲಿ ಸಿಕ್ಕಿಸಿಕೊಂಡ್ರು ಕಚ್ಚದೆ ಕೆಳಗಿಳಿಸುತ್ತೆ. ಅಬ್ಬಾ ಅದೆಂತಹಾ ಹೊಂದಾಣಿಕೆ ಅಲ್ವಾ.
ಸ್ವಾಮಿ ಇದಷ್ಟೇ ಅಲ್ಲಾ, ಈ ಕೋಳಿ ನಾಯಿಗಳ ಜೊತೆ ಒಂದು ಬೆಕ್ಕು ಸಹ ಇದೆ ಆದ್ರೇ ಮೂರು ಪ್ರಾಣಿಗಳು ತದ್ವಿರುದ್ಧವಾದ್ರೂ ಹೊಂದಾಣಿಕೆ ಬದುಕಿಗೆ ಅಣಿಯಾಗಿದ್ದು ಬೆಕ್ಕು ನಾಯಿ ಜೊತೆ ಕೋಳಿ ಸೇರಿ ಆಹಾರ ಸೇವಿಸುತ್ತವೆ.
ನೋಡಿ ನಾವು ಮನುಷ್ಯರು ಈ ಆಧುನಿಕ ಜೀವನ ಶೈಲಿಗೆ ಸಿಲುಕಿ ಬಂಧ ಬಂಧುಗಳ ಬಗ್ಗೆ ಮೌನ ತಾಳಿರುವಾಗ ಈ ಪ್ರಾಣಿಗಳ ಪ್ರೀತಿ ಪ್ರೇಮ ನಮ್ಗೆ ಪ್ರೇರಣೆ ಅಲ್ವೇ.
Kshetra Samachara
05/12/2020 03:17 pm