ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಕಾಲಕ್ಕೆ ಆರಂಭಗೊಳ್ಳದ ಹೆಸರು ಖರೀದಿ ಕೇಂದ್ರಗಳು; ರೈತರ ಗೋಳಾಟ ಹೇಳತೀರದು!

ಹುಬ್ಬಳ್ಳಿ: ಹೆಸರು ಬೆಳೆದ ರೈತರ ಸ್ಥಿತಿ ಹಲ್ಲಿದ್ದರೇ ಕಡಲೆ ಇಲ್ಲ, ಕಡಲೆ ಇದ್ದರೆ ಹಲ್ಲಿಲ್ಲ ಎಂಬಂತಾಗಿದೆ. ಈ ವರ್ಷ ಉತ್ತಮ ಬೆಳೆ ಬಂದಿದೆ. ಆದರೆ, ಸರ್ಕಾರ ಹೆಸರು ಖರೀದಿ ಕೇಂದ್ರ ಇನ್ನೂ ಸರಿಯಾಗಿ ಆರಂಭ ಮಾಡದೆ ಇರುವುದು ರೈತರ ಸಂಕಷ್ಟಕ್ಕೆ ಕಾರಣವಾಗಿದೆ.

ಕಳೆದ ಮೂರು ವರ್ಷಗಳಿಂದ ಧಾರವಾಡ ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಹೆಸರು ಬೆಳೆ ನೀರು ಪಾಲಾಗಿ ಅಳಿದುಳಿದ ಬೆಳೆಯನ್ನು ಮಾರಾಟ ಮಾಡಿದ್ದರು. ಅನೇಕರು ಇನ್ಮುಂದೆ ಹೆಸರು ಬೆಳೆಯುವುದೆ ಬೇಡ ಎಂದು ಪರ್ಯಾಯ ಬೆಳೆಯ ಮೊರೆ ಹೋಗಿದ್ದರು. ಆದರೆ, ಈ ವರ್ಷ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ.

ಹೆಸರು ಬೆಳೆದ ರೈತರಿಗೆ ವರದಾನವಾಗಿತ್ತು. ಹೆಸರು ಬೆಳೆ ಬಹುತೇಕವಾಗಿ ಬಂದ ನಂತರ ಸಾಕಷ್ಟು ಮಳೆರಾಯನ ಕಾಟ ಆರಂಭಗೊಂಡಿತು. ಈಗ ಹೆಸರು ಮಾರಾಟ ಮಾಡಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಸರ್ಕಾರ ಈವರೆಗೆ ಪೂರ್ಣ ಪ್ರಮಾಣದಲ್ಲಿ ಜಿಲ್ಲೆಯಲ್ಲಿ ಹೆಸರು ಖರೀದಿ ಕೇಂದ್ರ ಆರಂಭಿಸಿಲ್ಲ.

ಇನ್ನೂ ಕೇವಲ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದಲ್ಲಿ ಮಾತ್ರ ಎರಡು ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ನವಲಗುಂದದಲ್ಲಿ ಹೆಸರನ್ನು ಸರಿಯಾಗಿ ಒಣಗಿಸಿ ತೇವಾಂಶ ಕಡಿಮೆ ಆದ ಮೇಲೆ ಖರೀದಿ ಕೇಂದ್ರಕ್ಕೆ ತರಲು ಸೂಚನೆ ನೀಡಲಾಗಿದೆ. ಕುಂದಗೋಳ ತಾಲೂಕಿನಲ್ಲಿ ಮಾತ್ರ ನಿಧಾನವಾಗಿ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.

ಹುಬ್ಬಳ್ಳಿ ಧಾರವಾಡ ಗ್ರಾಮಾಂತರ ಪ್ರದೇಶಗಳಲ್ಲಿ ಯಾವುದೇ ರೀತಿಯ ಖರೀದಿ ಕೇಂದ್ರಗಳನ್ನ ತೆರೆದಿಲ್ಲ. ಮಳೆಯಿಂದ ಹೆಸರುಕಾಳು ಇಳುವರಿ ಉತ್ತಮವಾಗಿ ಈಗಾಗಲೇ ಹೊಲದಲ್ಲಿ ಹೆಸರು ರಾಶಿ ಹಾಕಿದ್ದು, ಒಂದಿಷ್ಟು ರೈತರು ತಮ್ಮ ತಮ್ಮ ಮನೆ ಓಣಿಗಳಲ್ಲಿ ಇಟ್ಟಿದ್ದಾರೆ.

ಭಾರಿ ಮಳೆಗೆ ರೈತರು ಆತಂಕದಲ್ಲಿ ಇದ್ದಾರೆ. ಇತ್ತ ದಲ್ಲಾಳಿಯವರಿಗೆ ಕೊಡಲು ಆಗದೇ ಮನೆಯಲ್ಲಿ ಇರಿಸಿಕೊಳ್ಳಲು ಆಗದೇ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿದಿದ್ದಾರೆ. ಪ್ರತಿ ಕ್ವಿಂಟಾಲ್​ಗೆ 7,775 ರೂ. ಬೆಂಬಲ ಬೆಲೆಯಡಿ ಸರ್ಕಾರ ಖರೀದಿ ಮಾಡಬೇಕಿದೆ. ಆದರೆ, ಈವರೆಗೆ ಸರ್ಕಾರ ಮಾತ್ರ ಹೆಸರು ಖರೀದಿ ಕೇಂದ್ರದಲ್ಲಿ ಇನ್ನು ಖರೀದಿ ಆರಂಭಿಸಿಲ್ಲ.

Edited By : Manjunath H D
Kshetra Samachara

Kshetra Samachara

13/09/2022 02:26 pm

Cinque Terre

31.24 K

Cinque Terre

1

ಸಂಬಂಧಿತ ಸುದ್ದಿ