ಧಾರವಾಡ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಆಗುತ್ತಿರುವ ಅನಾಹುತಗಳು ಒಂದೇ ಎರಡೇ? ಒಂದೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿ ಜನ ಜೀವನ ಅಸ್ತವ್ಯಸ್ಥಗೊಂಡಿದ್ದರೆ, ಇನ್ನೊಂದೆಡೆ ಮಳೆಯಿಂದಾಗಿ ಬೆಳೆದ ಬೆಳೆಯೆಲ್ಲ ನಾಶವಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಇದರಿಂದ ಅನ್ನದಾತ ಕಣ್ಣೀರು ಹಾಕುವಂತಾಗಿದೆ.
ಹೀಗೆ ನೀರಲ್ಲಿ ನಿಂತಿರುವ ಸೋಯಾಬಿನ್ ಬೆಳೆ ಒಂದೆಡೆಯಾದರೆ ಮತ್ತೊಂದೆಡೆ ಕೃಷಿ ಚಟುವಟಿಕೆಗೆ ಬಿಡುವು ಕೊಡದ ಮಳೆರಾಯ ರೈತನನ್ನು ಬೆಂಬಿಡದೇ ಕಾಡುತ್ತಿದ್ದಾನೆ. ಧಾರವಾಡ ತಾಲೂಕಿನಾದ್ಯಂತ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ಮಳೆಯಿಂದಾಗಿ ನಾಶವಾಗಿದೆ.
ಪ್ರಮುಖವಾಗಿ ಇನ್ನೇನು ಕಟಾವಿಗೆ ಬಂದ ಸೋಯಾಬಿನ್ ಬೆಳೆಯೇ ನಾಶವಾಗಿದ್ದು, ರೈತನ ಕಂಗಾಲಾಗುವಂತಾಗಿದೆ. ಇನ್ನೂ ಎರಡ್ಮೂರು ದಿನ ಮಳೆ ಹೀಗೇ ಮುಂದುವರೆಯುವ ಸಾಧ್ಯತೆ ಇದ್ದು, ಇದರಿಂದ ಬೆಳೆದ ಬೆಳೆ ಇನ್ನಷ್ಟು ನಾಶವಾಗುವ ಆತಂಕದಲ್ಲಿ ರೈತ ಸಮೂಹ ಇದೆ. ಕಟಾವಿಗೆ ಬಂದ ಉದ್ದಿನ ಬೆಳೆ ಕೂಡ ನಾಶವಾಗಿ ಗಿಡದಲ್ಲಿನ ಕಾಳುಗಳು ಕೆಳಗಡೆ ಬಿದ್ದು ಮರಳಿ ಮೊಳಕೆಯೊಡೆಯುತ್ತಿವೆ. ಕೂಡಲೇ ಸರ್ಕಾರ ರೈತನ ನೆರವಿಗೆ ಧಾವಿಸಬೇಕಾದ ಅನಿವಾರ್ಯತೆ ಇದೆ.
Kshetra Samachara
06/09/2022 09:27 pm