ಕುಂದಗೋಳ : ಒಂದೇಡೆ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಹೆಸರು ಖರೀದಿ ಕೇಂದ್ರ ತೆರಯಲಿ ಎನ್ನುವ ಒತ್ತಾಯದ ನಡುವೆ ಸದ್ಯ ಎಲ್ಲೇಡೆ ಸುರಿದ ಮಳೆಗೆ ಒಕ್ಕಲು ಮಾಡಿದ ಹೆಸರು ಕಾಳು ಮೊಳಕೆ ಒಡೆದು ರೈತ ಕಷ್ಟಕ್ಕೆ ಸಿಲುಕಿದ್ದಾನೆ.
ಕುಂದಗೋಳ ತಾಲೂಕಿನ ಎಲ್ಲೇಡೆ ಪ್ರಸಕ್ತ ಮುಂಗಾರಿನ ಹೆಸರು ಒಕ್ಕಲು ನಡೆಯುತ್ತಿದೆ. ಮಳೆ ಕಾರಣ ಸಂಪೂರ್ಣ ಯಂತ್ರದ ಮುಖೇನ ರೈತರು ಹೆಸರು ಕಟಾವು ಆರಂಭಿಸಿದ್ದಾರೆ ಆದರೂ ಅರ್ಧಕ್ಕಿಂತ ಹೆಚ್ಚು ಹೆಸರು ಮಳೆಗೆ ಸಿಲುಕಿ ಮೊಳಕೆ ಒಡೆದಿದ್ದು ರೈತನಿಗೆ ಆ ಬೆಳೆಯನ್ನು ಮಾರಾಟ ಮಾಡಲು ದಾರಿ ಕಾಣದಂತಾಗಿದೆ.
ಕುಂದಗೋಳ ತಾಲೂಕಿನಲ್ಲಿ ಒಟ್ಟು ಈ ಬಾರಿ 3500 ಹೇಕ್ಟರ್ ಪ್ರದೇಶದಲ್ಲಿ ಹೆಸರು ಬಿತ್ತನೆಯಾಗಿದ್ದು, ಅದರಲ್ಲಿ ಅರ್ಧ ಹೆಸರು ಬೆಳೆ ಹಾಳಾಗಿದೆ ಎಂಬುದು ರೈತರ ಅಭಿಪ್ರಾಯವಾಗಿದೆ.
ಬಹುತೇಕ ರೈತರು ಬೆಳೆ ಮೊಳಕೆ ಒಡೆದ ಕಾರಣ ಆ ಬೆಳೆಯನ್ನು ಒಣಗಿಸಲು ಸೂಕ್ತ ಬಿಸಿಲಿಲ್ಲದೆ ಪರದಾಡುತ್ತಿದ್ದಾರೆ. ತರಾರುರಿಯಲ್ಲಿ ಬೆಳೆ ಮಾರುವ ಆಲೋಚನೆ ಮಾಡುತ್ತಿದ್ದಾರೆ.
ಒಟ್ಟಾರೆ ಸರ್ಕಾರದ ಬೆಂಬಲ ಬೆಲೆ ಮಾತ್ರವಲ್ಲದೆ, ಕುಂದಗೋಳ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಹ ನಶಿಸಿ ಹೋಗುತ್ತಿದ್ದು ಈಗಾಗಲೇ ವ್ಯಾಪಾರಸ್ಥರಿಗೆ ಜಾಗ ಹಂಚಿಕೆಯಾದ್ರೂ ಇಂದಿಗೂ ಯಾವುದೇ ವಹಿವಾಟು ನಡೆಯದೇ ಇರುವುದು ಕೃಷಿಕರಿಗೆ ಕುತ್ತಾಗಿದೆ.
ಶೀಘ್ರ ಉತ್ತಮ ಹೆಸರಿಗೆ ಬೆಂಬಲ ಬೆಲೆ ಜೊತೆ ಬೆಳೆ ಹಾಳಾದವರಿಗೆ ಪರಿಹಾರ ಸಿಗಲಿ ಎಂಬುದು ರೈತರ ಆಶಯ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
28/08/2022 12:48 pm