ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹತ್ತಿ ಹಾಳಾಯಿತು... ಹೆಸರು ಬೆಳೆ ಹೇಳಲು ಹೆಸರಿಲ್ಲದಂತಾಯಿತು...!

ಹುಬ್ಬಳ್ಳಿ: ಕಿಲ್ಲರ್ ಕೊರೋನಾದ ರೌದ್ರನರ್ತನ ಒಂದೆಡೆಯಾದರೆ. ಮತ್ತೊಂದು ಕಡೆಗೆ ವರುಣನ ಅರ್ಭಟ. ಈ ಎರಡರ ನಡುವಿನ ಸಿಲುಕಿಕೊಂಡು ಜನರು ಅಕ್ಷರಶಃ ನರಕಯಾತನೆ ಅನುಭವಿಸುತ್ತಿದ್ದಾರೆ. ದೂರದ ನಗರದಲ್ಲಿ ಕೆಲಸ ಮಾಡುತ್ತಿದ್ದವರು ಕೊರೋನಾ ಕಂಟಕದಿಂದ ಕೆಲಸ ಕಾರ್ಯವನ್ನು ಬಿಟ್ಟು ಹಳ್ಳಿಗಳಿಗೆ ಬಂದು ಕೃಷಿ ಮಾಡುತ್ತಿದ್ದಾರೆ. ಆದರೆ ವರುಣನ ಅಬ್ಬರಿಂದ ಹತ್ತಿಯು ಹಾಳಾಗಿದ್ದು, ಹೆಸರು ಬೆಳೆ ಹೇಳಲು ಹೆಸರಿಲ್ಲದಂತಾಗಿದೆ.

ಅಕಾಲಿಕವಾಗಿ ಬರುವ ಕೊರೋನಾ ಸೋಂಕು ಹಾಗೂ ಅಕಾಲಿಕವಾಗಿ ಸುರಿಯುವ ಮಳೆಯಿಂದ ರೈತ ಸಮುದಾಯ ಜೀವನ ನಡೆಸುವುದೇ ದುಸ್ತರವಾಗಿದೆ. ಸುಮಾರು ಹದಿನೈದಕ್ಕೂ ಹೆಚ್ಚು ದಿನಗಳ ಕಾಲ ಸುರಿದ ಮಳೆಯಿಂದ ರೈತರು ಬೆಳೆದ ಬೆಳೆ ಸಂಪೂರ್ಣ ಹಾಳಾಗಿದೆ. ಅಲ್ಲದೆ ಹೆಸರು ಬೆಳೆಯು ಮೊಳಕೆ ಒಡೆದು ಉಪಯೋಗಕ್ಕೆ ಬಾರದಂತಾಗಿದೆ.

ಧಾರವಾಡ,ಗದಗ ಹಾಗೂ ಹಾವೇರಿ ಜಿಲ್ಲೆಯಾದ್ಯಂತ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಫಸಲು ಕಟಾವು ಮಾಡುವ ಸಮಯಕ್ಕೆ ಮಳೆರಾಯನ ಆಗಮನದಿಂದ ಕೈಗೆ ಬಂದಿರುವ ತುತ್ತು ಬಾಯಿಗೆ ಬರದಂತಾಗಿದೆ.

ಸಾವಿರಾರು ಹೆಕ್ಟೇರ್ ಹತ್ತಿ ಬೆಳೆ ಹಾಗೂ ನೂರಾರು ಹೆಕ್ಟೇರ್ ಹೆಸರು ಬೆಳೆ ಹಾಳಾಗಿದೆ. ಹತ್ತಿಯು ಸಂಪೂರ್ಣ ಕೆಂಪಾಗಿದ್ದು, ರೋಗ ಬಾಧೆಯಿಂದ ಬಳಲುತ್ತಿದೆ. ಇನ್ನೂ ಹೆಸರು ಕಾಳು ಬಳ್ಳಿಯಲ್ಲಿಯೇ ಮೊಳಕೆ ಒಡೆದಿದ್ದು, ಅನ್ನದಾತನ ಕಷ್ಟವನ್ನು ಅಣುಕಿಸುವಂತಿದೆ.

ಒಟ್ಟಿನಲ್ಲಿ ರೈತ ಸಮುದಾಯ ಒಂದಿಲ್ಲೊಂದು ರೀತಿಯಲ್ಲಿ ಸಮಸ್ಯೆ ಸುಳಿಯಲ್ಲಿ ಸಿಲುಕಿಕೊಂಡು ಪರದಾಡುವಂತಾಗಿದೆ. ಅಲ್ಲದೇ ಬರುವ ಆರು ಕಾಸು ಮೂರು ಕಾಸು ಪರಿಹಾರವನ್ನು ನೆಚ್ಚಿಕೊಂಡು ಬದುಕಿನ ಬಂಡೆಯನ್ನು ತಳ್ಳಬೇಕಿದೆ.

Edited By : Manjunath H D
Kshetra Samachara

Kshetra Samachara

08/12/2021 12:07 pm

Cinque Terre

24.82 K

Cinque Terre

1

ಸಂಬಂಧಿತ ಸುದ್ದಿ