ನವಲಗುಂದ : ಶುಕ್ರವಾರ ಸುರಿದ ಅಕಾಲಿಕ ಭಾರಿ ಮಳೆಗೆ ನವಲಗುಂದ ತಾಲೂಕಿನ ಭತ್ತ, ಹತ್ತಿ, ಮೆಣಸಿನಕಾಯಿ, ಕಡಲೆ, ತರಕಾರಿ ಸೇರಿದಂತೆ ಬೆಳೆದು ನಿಂತಿರುವ ವಿವಿಧ ಬೆಳೆಗಳು ಅಪಾರ ಪ್ರಮಾಣದಲ್ಲಿ ಹಾನಿಗೀಡಾಗಿದ್ದು ರೈತರಿಗೆ ಭಾರಿ ನಷ್ಟವಾಗಿದೆ.
ಕಳೆದ ಕೆಲವು ದಿನಗಳಿಂದ ಮೋಡ ಕವಿದ ವಾತಾವರಣವಿತ್ತು, ಆದರೆ ನೆನ್ನೆ ಸತತವಾಗಿ ಏಳು ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ ಕಡಲೆ ಸೇರಿದಂತೆ ಹಲವು ಬೆಳೆಗಳಿಗೆ ಹಾನಿಯಾಗಿದೆ.
ಇನ್ನೇನು ಬೆಳೆ ಕೈ ಹಿಡಿದಿದೆ ಎನ್ನುವಷ್ಟರಲ್ಲಿ ಮಳೆರಾಯ ರೈತರ ಮೇಲೆ ಕರುಣೆ ತೋರದೆ ತನ್ನ ರೌದ್ರತೆಯನ್ನು ತೋರಿದ್ದಾನೆ.
Kshetra Samachara
09/01/2021 03:07 pm