ಕುಂದಗೋಳ : ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮ ರಾಜ್ಯದೆಲ್ಲೇಡೆ ಸುರಿದ ಅಕಾಲಿಕ ಮಳೆಯಿಂದಾಗಿ ಕುಂದಗೋಳ ತಾಲೂಕಿನ ರೈತರ ಬದುಕು ಮತ್ತೆ ಕಷ್ಟದ ಕೂಪಕ್ಕೆ ನೂಕಲ್ಪಟ್ಟಿದೆ.
ಕಳೆದೊಂದು ವಾರದಿಂದ ಮೋಡ ಮುಸುಕಿದ ವಾತಾವರಣ ತೋರಿದ್ದ ವರುಣ ನಿನ್ನೆ ಮಧ್ಯಾಹ್ನದಿಂದ ರಾತ್ರಿಯವರೆಗೆ ಎಡ ಬಿಡದೆ ಸುರಿದ ಪರಿಣಾಮ ತುಸು ಜೀವ ಹಿಡಿದು ಉತ್ತಮ ಫಸಲಿನ ಭರವಸೆ ನೀಡಿದ್ದ ಹಿಂಗಾರು ಬೆಳೆಗಳಾದ ಗೋಧಿ, ಕಡಲೆ, ಕುಸುಬೆ, ಜೋಳದ ಬೆಳೆ ಹಾನಿಯಾಗಿದೆ.
ತೆನೆ ಮೂಡಲು ತಯಾರಾಗಿದ್ದ ಜೋಳ ಬೆಳೆ ನೆಲಕ್ಕೆ ಅಪ್ಪಳಿಸಿದ್ದರೆ, ಕಡಲೆ ಬೆಳೆ ಹುಳಿ ತೊಳೆದು ಹೋಗಿದೆ, ಗೋಧಿ ಬೆಳೆಗೆ ನೀರು ಅತಿಯಾಗಿ ಭೂಮಿಗೆ ಬಾಗಿದರೆ, ಹೂ ತೊಂಡಿಲು ಹಿಡಿದು ಕುಸುಬೆ ಮೆಳೆಗೆ ಹಾಳಾಗಿದೆ.
ಒಟ್ಟಾರೆ ಕುಂದಗೋಳ ತಾಲೂಕಿನ ಒಣ ಬೇಸಾಯದ ಭೂಮಿಯಲ್ಲಿ ಹವಾಮಾನ ಆಶ್ರಿತ ಹಿಂಗಾರು ಬೆಳೆಗಳಿಗೆ ಅಕಾಲಿಕ ಮಳೆ ಕಂಟಕವಾಗಿ ಪರಿಣಮಿಸಿದೆ.ಮುಂಗಾರು ಬೆಳೆ ಅತಿವೃಷ್ಟಿಗೆ ತುತ್ತಾದಂತೆ ಎಲ್ಲಿ ಹಿಂಗಾರು ಬೆಳೆಯೂ ಕೂಡಾ ಹಾಳಾಗುತ್ತದೆಯೋ ಏನೋ ಅಂತಾ ಚಿಂತೆ ಮಾಡುವಂತ್ತಾಗಿದೆ.
Kshetra Samachara
09/01/2021 02:26 pm