ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಹತ್ತಿ ಬೆಳೆದ ರೈತನಿಗೆ ನಿವಾರ್ ಕಂಟಕ..?

ವರದಿ:ವಿನೋದ ಇಚ್ಚಂಗಿ,ಪಬ್ಲಿಕ್ ನೆಕ್ಸ್ಟ್ ನವಲಗುಂದ

ನವಲಗುಂದ : ಹವಾಮಾನ ವೈಪರಿತ್ಯ ಈಗ ದೇಶದ ಬೆನ್ನೆಲುಬಾದ ರೈತನ ಬೆನ್ನನೇ ಮುರಿಯಲು ಹೊರಟಂತೆ ಕಾಣುತ್ತಿದೆ. ಈಗಾಗಲೇ ನಿವಾರ್ ಚಂಡಮಾರುತದ ಎಫೆಕ್ಟ್ ಬೆಂಗಳೂರಿನ ವರೆಗೂ ಬಿಸಿದ್ದು, ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮೋಡ ಕವಿದ ವಾತಾವರಣ ಮನೆ ಮಾಡಿರೋದು ಹತ್ತಿ ಬೆಳೆದ ರೈತರಲ್ಲಿ ಆತಂಕವನ್ನು ಉಂಟುಮಾಡಿದೆ.

ಹೌದು ಸಾಲ ಸೂಲ ಮಾಡಿ ಹತ್ತಿ ಬೆಳೆಯನ್ನು ಬೆಳೆದ ರೈತ ಈಗ ಆತಂಕದಲ್ಲಿರೋದಂತೂ ನಿಜಾ, ಈಗಾಗಲೇ ನಿವಾರ್ ಚಂಡಮಾರುತ ದಕ್ಷಿಣ ಭಾರತದ ಬಹುತೇಕ ಕಡೆಗಳಲ್ಲಿ ತನ್ನ ಆರ್ಭಟ ತೋರುತ್ತಿದ್ದಾನೆ. ಇದರ ಎಫೆಕ್ಟ್ ಕರ್ನಾಟಕಕ್ಕೂ ಆಗುವ ಸಾಧ್ಯತೆಗಳಿವೆ, ಒಂದು ವೇಳೆ ಮಳೆ ಬಂದರೆ ಬೆಳೆದ ಹತ್ತಿ ಕೈಗೆ ಸಿಗದಂತಾಗಿ ಬಿಡುತ್ತೆ ಅನ್ನೋ ಭಯ ರೈತನದ್ದು, ಇನ್ನೂ ಮೋಡ ಕವಿದ ವಾತಾವರಣಕ್ಕೆ ಈಗಾಗಲೇ ಕಾಯಿ, ಮೊಗ್ಗು, ಹೂವು ಹಾಳಾಗಿ ಹೋಗಿದೆ, ಗಿಡಗಳಿಗೆ ಎಷ್ಟು ಎಣ್ಣೆ ಹೊಡೆದರು ನಿಯಂತ್ರಣ ಆಗುತ್ತಿಲ್ಲಾ, ಈಗ ಮಳೆ ಬಂದದ್ದೇ ಆದಲ್ಲಿ ಹತ್ತಿ ಸಂಪೂರ್ಣ ನೆಲಸಮ ಆಗಿ ಬಿಡುತ್ತೆ, ಮೊದಲೇ ತಂಪು ವಾತಾವರಣದಿಂದ ಬೆಳೆ ಸರಿಯಾಗಿ ಬಂದಿಲ್ಲಾ ಅಂತಾರೆ ರೈತರಾದ ಶಿವಾನಂದ ಚಿಕ್ಕನರಗುಂದ...

ಈಗಾಗಲೇ ನವಲಗುಂದ ಸೇರಿದಂತೆ ಹಲವು ಭಾಗಗಳಲ್ಲಿ ಹೆಚ್ಚಾಗಿ ಹತ್ತಿ ಬೆಳೆಯನ್ನೇ ನಂಬಿಕೊಂಡಿರೋ ರೈತರು ಈಗ ಈ ಚಂಡಮಾರುತದ ಭಯದಲ್ಲಿ ಕಾಲ ಕಳೆಯುತ್ತಿದ್ದಾರೆ. ಕಳೆದ ಎರಡಮೂರು ದಿನಗಳಿಂದ ಮೋಡ ಮುಸುಕಿದ ವಾತಾವರಣವೆ ಈಗ ರೈತರಲ್ಲಿ ಆತಂಕವನ್ನು ಹೆಚ್ಚಿಸಿರೋದು, ಅದೇನೇ ಇರಲಿ ದೇಶದ ಬೆನ್ನೆಲುಬಾದ ರೈತನಿಗೆ ಚಂಡಮಾರುತದ ಎಫೆಕ್ಟ್ ಆಗದೆ ಇರಲಿ ಎಂಬುದೇ ನಮ್ಮ ಆಶಯ...

Edited By : Manjunath H D
Kshetra Samachara

Kshetra Samachara

27/11/2020 11:21 am

Cinque Terre

41.71 K

Cinque Terre

0

ಸಂಬಂಧಿತ ಸುದ್ದಿ