ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಬೋರವೆಲ್ ನಿಂದ ಪುಟಿಯುತ್ತಿದೆ ನೀರು ಏಕೆ ಗೊತ್ತಾ?

ಧಾರವಾಡ: ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಭುಜಬಲಿ ಅಷ್ಟಗಿ ಅವರ ಹೊಲದಲ್ಲಿರುವ ಬೋರವೆಲ್ ನಿಂದ ಕಳೆದ ಆರೇಳು ದಿನಗಳಿಂದ ನೀರು ಪುಟಿಯುತ್ತಿದೆ. ಇದಕ್ಕೆ ಕಾರಣ ವಿಪರೀತ ಮಳೆ.

ಬೋರವೆಲ್ ಕೊರೆಯಿಸಿದಾಗ ಇದರಿಂದ ಕೇವಲ ಮೂರು ಇಂಚು ನೀರು ಹೊರ ಬಂದಿತ್ತು. ಆದರೆ, ಈಗ ಅಂತರ್ಜಲಮಟ್ಟ ಹೆಚ್ಚಳವಾಗಿ ಹೆಚ್ಚಿನ ನೀರು ಬೋರವೆಲ್ ನಿಂದ ತಂತಾನೆ ಹೊರ ಹೋಗುತ್ತಿದೆ.ಕಳೆದ ಕೆಲವು ದಿನಗಳಿಂದ ಸುರಿದ ಮಳೆಯಿಂದಾಗಿ ಭೂಮಿಯಲ್ಲಿ ಅಂತರ್ಜಲಮಟ್ಟ ಹೆಚ್ಚಳವಾಗಿದ್ದೇ ಈ ಬೋರವೆಲ್ ನಿಂದ ನೀರು ಬರಲು ಕಾರಣವಾಗಿದೆ ಎನ್ನುತ್ತಾರೆ ಭುಜಬಲಿ

ಈ ರೀತಿ ನೀರು ಬೋರವೆಲ್ ನಿಂದ ಹೊರ ಹೋಗುತ್ತಿರುವುದರಿಂದ ಕೃಷಿ ಭೂಮಿ ಸಾಕಷ್ಟ ತಂಪು ಹಿಡಿದುಕೊಂಡಿದೆ. ಭೂಮಿ ಬಿಸಿಲಿಗೆ ಆರುವ ತನಕ ಕೃಷಿ ಚಟುವಟಿಕೆ ನಡೆಸಲು ಬರುವುದಿಲ್ಲ. ವಿಪರೀತ ಮಳೆಯ ಜೊತೆಗೆ ಬೋರವೆಲ್ ನಿಂದ ಹೊರ ಹೋಗುತ್ತಿರುವ ಈ ನೀರಿನಿಂದಾಗಿ ಮತ್ತೊಂದು ರೀತಿಯಲ್ಲಿ ರೈತ ಭುಜಬಲಿ ಸಂಕಷ್ಟ ಅನುಭವಿಸುವಂತಾಗಿದೆ.

Edited By : Manjunath H D
Kshetra Samachara

Kshetra Samachara

25/10/2020 02:30 pm

Cinque Terre

30.62 K

Cinque Terre

2

ಸಂಬಂಧಿತ ಸುದ್ದಿ