ಧಾರವಾಡ: ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಒಳಗೊಳಗೆ ಹರಿಯುವವಳು.. ಜೀವ ಹಿಂಡಿ ಹಿಪ್ಪೆ ಮಾಡಿ ಒಳಗೊಳಗೆ ಕೊರೆಯುವವಳು.. ಸದಾ.. ಗುಪ್ತಗಾಮಿನಿ.. ನನ್ನ ಶಾಲ್ಮಲಾ.. ಎಂಬ ಡಾ.ಚಂದ್ರಶೇಖರ ಪಾಟೀಲರ ಈ ಹಾಡನ್ನು ಕೇಳಿದರೆ ನಮಗೆ ಥಟ್ಟನೆ ನೆನಪಾಗೋದು ಧಾರವಾಡದ ಸೋಮೇಶ್ವರದಲ್ಲಿರುವ ಶಾಲ್ಮಲಾ ನದಿ. ಶಾಲ್ಮಲಾ ನದಿ ಗುಪ್ತಗಾಮಿನಿಯಾಗಿ ಹರಿಯುತ್ತಾಳೆ. ಇಲ್ಲಿರುವ ಕಲ್ಯಾಣಿ ಬತ್ತಿದ ಬಗ್ಗೆ ಉದಾಹರಣೆಯೇ ಇಲ್ಲ. ಇದಕ್ಕೆ ನೂರಾರು ವರ್ಷಗಳ ಇತಿಹಾಸ ಇದೆ. ಈ ಶಾಲ್ಮಲಾ ನದಿ ಎಲ್ಲಿ ಹುಟ್ಟಿದೆ. ಎಲ್ಲಿಗೆ ಹರಿಯುತ್ತದೆ ಎಂಬುದೂ ಗೊತ್ತಿಲ್ಲ. ಆದರೆ, ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ಸೋಮೇಶ್ವರ ದೇವಸ್ಥಾನದಲ್ಲಿರುವ ಕಲ್ಯಾಣಿಯಲ್ಲಿ ಶಾಲ್ಮಲೆ ತನ್ನ ಇರುವಿಕೆಯನ್ನು ತೋರಿಸುತ್ತಾಳೆ. ಇದೀಗ ಶಾಲ್ಮಲೆ ಮಲೀನವಾಗುತ್ತಿರುವ ಕುರಿತ ವರದಿ ಇಲ್ಲಿದೆ ನೋಡಿ..
Kshetra Samachara
20/10/2020 05:47 pm