ಧಾರವಾಡ: 2007ರಲ್ಲಿ ಪದವಿ ಪಡೆದು ಉತ್ತೀರ್ಣರಾಗಿ ಹೋದ ನಂತರ ವಿದ್ಯಾರ್ಥಿಗಳು 15 ವರ್ಷಗಳ ನಂತರ ಮತ್ತೆ ಅದೇ ಕಾಲೇಜಿನಲ್ಲಿ ಸಮಾಗಮಗೊಂಡಿದ್ದಾರೆ.
ಹೌದು. ಇದಕ್ಕೆ ಸಾಕ್ಷಿಯಾಗಿದ್ದು ಧಾರವಾಡದ ಪ್ರತಿಷ್ಠಿತ ಕರ್ನಾಟಕ ಕಾಲೇಜು. ಕರ್ನಾಟಕ ಕಾಲೇಜಿನಲ್ಲಿ ಪದವಿ ಪಡೆದು ಹೋದ ನಂತರ ಈ ವಿದ್ಯಾರ್ಥಿಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿವಿಧ ಇಲಾಖೆ, ಖಾಸಗಿ ಕಂಪೆನಿ, ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.
ಇದೀಗ ಎಲ್ಲಾ ವಿದ್ಯಾರ್ಥಿಗಳು ಮತ್ತೆ ಅದೇ ಕಾಲೇಜಿನಲ್ಲಿ ಸೇರಿ ತಮಗೆ ಪಾಠ ಹೇಳಿಕೊಟ್ಟ ಗುರುಗಳಿಗೆ ಸನ್ಮಾನಿಸಬೇಕು ಎಂಬ ಉದ್ದೇಶದಿಂದ ಕಾಲೇಜಿನಲ್ಲಿ ಸಮಾಗಮಗೊಂಡು ಪಾಠ ಕಲಿಸಿದ ಗುರುಗಳನ್ನು ಸನ್ಮಾನಿಸಿದ್ದಾರೆ. 15 ವರ್ಷಗಳ ನಂತರ ಸ್ನೇಹಿತರನ್ನು ಕಂಡು ಖುಷಿಪಟ್ಟರು. ಅಲ್ಲದೇ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡು ಕುಣಿದು ಕುಪ್ಪಳಿಸಿದರು. ಇದೇ ಕಾಲೇಜಿನಲ್ಲಿ ಕಲಿತ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ರಾಜ್ಯ ನಿರ್ದೇಶಕ ಶರಣು ಅಂಗಡಿ ಮುಂದಾಳತ್ವದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
Kshetra Samachara
04/05/2022 03:29 pm