ಕುಂದಗೋಳ: ಪಟ್ಟಣದಿಂದ ಹುಬ್ಬಳ್ಳಿಗೆ, ಹುಬ್ಬಳ್ಳಿಯಿಂದ ಕುಂದಗೋಳ, ಲಕ್ಷ್ಮೇಶ್ವರ ಹೀಗೆ ನಾನಾ ಊರುಗಳಿಗೆ ಸಾರಿಗೆ ಬಸ್ ನಲ್ಲಿ ಸಂಚಾರ ಮಾಡಿದ್ರೇ ಬ್ರಿಡ್ಜ್ ಫೀ ಎಂದು ಪ್ರತಿ ಪ್ರಯಾಣಕ್ಕೆ 2 ರೂಪಾಯಿ ಪ್ರಯಾಣಿಕರಿಗೆ ಹೊರೆ ಬೀಳ್ತಾ ಇದೆ!
ಆದ್ರೇ, ಈ ಬ್ರಿಡ್ಜ್ ಫೀ ಯಾವುದಕ್ಕೆ ಎಂಬುದು ಗೊತ್ತಿಲ್ಲದೆ ಕಂಡಕ್ಟರ್ ಟಿಕೆಟ್ ಕೊಟ್ಟರೆ, ಸ್ವತಃ ಕುಂದಗೋಳ ಸಾರಿಗೆ ನಿಯಂತ್ರಕರು ಸಹ ಈ ವಿಷಯದಲ್ಲಿ ಗೊಂದಲದಲ್ಲಿದ್ದಾರೆ. ಗಬ್ಬೂರು ಬ್ರಿಡ್ಜ್ ಫೀ ಇದು ಎಂದು ಒಬ್ಬರು ಸಾರಿಗೆ ನಿಯಂತ್ರಕರು ಹೇಳಿದ್ರೇ ಇನ್ನೊಬ್ಬರು ಶಿರೂರು ಬ್ರಿಡ್ಜ್ ಫೀ ಅಂತಾರೇ.
ಹುಬ್ಬಳ್ಳಿ ಲಕ್ಷ್ಮೇಶ್ವರ ಎಕ್ಸ್ ಪ್ರೆಸ್, ಹುಬ್ಬಳ್ಳಿ ಕುಂದಗೋಳ ಆರ್ಡಿನರಿ ಎಲ್ಲಾ ಬಸ್ ಗಳಿಗೂ ಈ ಫೀ ಅನ್ವಯ. ಹುಬ್ಬಳ್ಳಿಯಿಂದ ಬಸ್ ಹತ್ತಿ ಎಲ್ಲೇ ಪ್ರಯಾಣ ಮುಗಿಸಿದರೂ ಫೀ ಬೀಳುತ್ತೆ. ಇತ್ತ ಕುಂದಗೋಳ, ಲಕ್ಷ್ಮೇಶ್ವರ ಬಸ್ ಹತ್ತಿ ಎಲ್ಲೇ ಪ್ರಯಾಣ ಮುಗಿಸಿದ್ರೂ ಈ ಫೀ ಬೀಳುತ್ತೆ. ವಿಶೇಷವಾಗಿ ಇದರಲ್ಲಿ ಶರೇವಾಡ ಟೋಲ್ ಬಂದ್ ಇದೆ.
ಇನ್ನು, ಸಾರಿಗೆ ಅಧಿಕಾರಿಗಳು ಗಬ್ಬೂರು ಬ್ರಿಡ್ಜ್ ಫೀ ಪಡೆದರೂ ಸಾರಿಗೆ ಬಸ್ ಬಂಕಾಪೂರ ಚೌಕ, ನ್ಯೂ ಇಂಗ್ಲಿಷ್ ಮೂಲಕ ಹೊಸೂರು ಬಸ್ ನಿಲ್ದಾಣ ಸೇರುತ್ತೆ, ಬಸ್ ಗಬ್ಬೂರ ಬ್ರಿಡ್ಜ್ ಮೇಲೆ ಪ್ರಮಾಣ ಮಾಡದೆ ಇದ್ರೂ ಫೀ ಯಾಕೆ ? ಎಂಬುದು ಸಾರ್ವಜನಿಕರ ಪ್ರಶ್ನೆ.
ಒಟ್ಟಾರೆ ನಿತ್ಯ ನೂರಾರು ಬಸ್ ಓಡಾಟ ನಡೆಸುವ ಕುಂದಗೋಳ ಬಸ್ ನಿಲ್ದಾಣದಿಂದ ಸಾವಿರಾರು ಜನ ಪ್ರಯಾಣ ಮಾಡ್ತಾರೆ. ಒಬ್ಬರಿಗೆ ಪ್ರಯಾಣದಲ್ಲಿ ನಿತ್ಯ ಹೋಗಿ ಬರುವ ಸಾರಿಗೆ ವೆಚ್ಚದಲ್ಲಿ 4 ರೂಪಾಯಿ ಫೀ ಹೋದ್ರೆ ಜನ ಸಾಮಾನ್ಯರ ಪಾಡೇನು ? ಈ ಬಗ್ಗೆ ಸಾರಿಗೆ ಅಧಿಕಾರಿಗಳು ಗಮನ ಹರಿಸಬೇಕಿದೆ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
03/08/2022 04:04 pm