ಹುಬ್ಬಳ್ಳಿ: ಹತ್ತಾರು ವರ್ಷಗಳಿಂದ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಪಟ್ಟಾಗಿ ಜಮಾಯಿಸಿದ್ದ ಬಹುತೇಕ ಪೊಲೀಸ್ ಸಿಬ್ಬಂದಿಯನ್ನು ಬೇರೆ ಬೇರೆ ಸ್ಥಳಗಳಿಗೆ ವರ್ಗಾವಣೆ ಮಾಡಲಾಗಿತ್ತು.
ಆದರೆ ಅದ್ಯಾವುದೋ ಪ್ರಭಾವದಿಂದ ಮತ್ತೇ ನಾಲ್ಕು ಸಿಬ್ಬಂದಿ ಮರಳಿ ಅದೇ ಠಾಣೆಗೆ ಬಂದಿರುವುದು ಸಂಶಯಕ್ಕೆ ಕಾರಣವಾಗಿದೆ.
ಐದರಿಂದ ಹತ್ತು ವರ್ಷಗಳ ಕಾಲ ಒಂದೇ ಠಾಣೆಯಲ್ಲಿ ಠಿಕಾಣಿ ಹೂಡಿದ್ದ ಪೊಲೀಸ್ ಕಾನ್ಸ್ಟೇಬಲ್, ಹೆಡ್‌ಕಾನ್ಸ್ಟೇಬಲ್, ಎಎಸ್ಐ ಸೇರಿದಂತೆ ಒಟ್ಟು 49 ಜನ ಸಿಬ್ಬಂದಿಯನ್ನು ಧಾರವಾಡ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ್ ಕಳೆದ ದಿ. 16 ರಂದು ಕಲಘಟಗಿ, ನವಲಗುಂದ, ಕುಂದಗೋಳ, ಅಣ್ಣಿಗೇರಿ ಠಾಣೆಗಳಿಗೆ ಟ್ರಾನ್ಸ್ಫರ್ ಮಾಡಿದ್ದರು.
ಆದರೆ ವರ್ಗಾವಣೆ ಮಾಡಿ ಒಂದೇ ವಾರದಲ್ಲಿ ನಾಲ್ವರನ್ನು ಮತ್ತೆ ಹಳೆಯ ಠಾಣೆಗೆ ನಿಯುಕ್ತಿಮಾಡಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿಗಳ ಈ ನಡೆ ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ರಾಜಕೀಯ ಒತ್ತಡದ ಹಿನ್ನೆಲೆಯಲ್ಲಿ ಅಣ್ಣಿಗೇರಿ, ಗರಗ, ಕಲಘಟಗಿ, ನವಲಗುಂದ ಪೊಲೀಸರಿಗೆ ಮತ್ತೆ ತಮ್ಮದೇ ಠಾಣೆಗಳಲ್ಲಿ ಮುಂದುವರಿಯಲು ಅವಕಾಶ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಬೇರೆಡೆ ಹೋಗಲು ನಿರಾಕರಿಸಿರುವ ಪೊಲೀಸರ ಬಗ್ಗೆಯೂ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ವಸೂಲಿ ದಂಧೆಗೆ ಒಗ್ಗಿಕೊಂಡವರು ಠಾಣೆ ಬಿಟ್ಟು ಬೇರೆಡೆ ಹೋಗಲು ಒಪ್ಪುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಎಸ್‌ಪಿ ಸಾಹೇಬರು ಕ್ರಮ ಕೈಗೊಳ್ಳುವುದಾದರೆ ಎಲ್ಲರಿಗೂ ಸಮನಾದ ಕ್ರಮ ಜರುಗಿಸಬೇಕಿತ್ತು ಎಂದು ಪೊಲೀಸ್ ಸಿಬ್ಬಂದಿಯೇ ಮಾತನಾಡಿಕೊಳ್ಳುವಂತಾಗಿದೆ.
Kshetra Samachara
25/06/2022 09:39 pm