ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳನ್ನು ಅತಿಕ್ರಮಣ ಮಾಡಿದವರಿಗೆ ಮಹಾನಗರ ಬೆಳ್ಳಂಬೆಳಿಗ್ಗೆ ಶಾಕ್ ನೀಡಿದ್ದು, ಅತಿಕ್ರಮಣ ತೆರವು ಕಾರ್ಯಾಚರಣೆ ಚುರುಕುಗೊಳಿಸಿದೆ.
ಹೌದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಲಯಕಚೇರಿ 5ರ ವ್ಯಾಪ್ತಿಯ ವಾರ್ಡ್ ನಂಬರ-49ರ ಗೋಕುಲ್ ರಸ್ತೆ ರವಿನಗರದ ಮುಖ್ಯರಸ್ತೆಯಲ್ಲಿನ ರಸ್ತೆಯ ಅತಿಕ್ರಮಣವನ್ನು ತೊಳನಕೆರೆವರೆಗೆ ಸಹಾಯಕ ಆಯುಕ್ತ ಶರಣಬಸಪ್ಪ ಕೆಂಭಾವಿ ಇವರ ನೇತೃತ್ವದಲ್ಲಿ ಗೋಕುಲ್ ರಸ್ತೆ ಪೊಲೀಸ್ ಸಿಬ್ಬಂದಿಯ ಸಹಯೋಗದೊಂದಿಗೆ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು.
ಈ ವೇಳೆ ಪಾಲಿಕೆಯ ಉಪ ನಿರ್ದೇಶಕರು ಸಿ.ಬಿ. ಮುದೊಳ್ಕರ, ಕಿರಿಯ ಅಭಿಯಂತರರು ಅಭಿಷೇಕ್ ಹಾಗೂ ಇತರೆ ಪಾಲಿಕೆ ಸಿಬ್ಬಂದಿಗಳು ಉಪಸ್ಥಿತರಿದ್ದರು. ಈಗಾಗಲೇ ಪಾಲಿಕೆಯಿಂದ ನೋಟಿಸ್ ನೀಡಿದ್ದು, ತೆರವು ಕಾರ್ಯಾಚರಣೆ ನಡೆಸಲಾಯಿತು.
Kshetra Samachara
28/04/2022 09:34 am