ನವಲಗುಂದ : ಎಗ್ ರೈಸ್ ಅಂಗಡಿ, ಹೋಟೆಲ್ ಗಳನ್ನು ಟಾರ್ಗೆಟ್ ಮಾಡಿ, ಲೈಸೆನ್ಸ್ ಕೊಡಿಸುವುದಾಗಿ ಹೇಳಿಕೊಂಡು ನವಲಗುಂದ ಪಟ್ಟಣಕ್ಕೆ ಎಂಟ್ರಿ ಕೊಟ್ಟ ಖದೀಮರ ಕೃತ್ಯಗಳನ್ನು ನಿಮ್ಮ ಪಬ್ಲಿಕ್ ನೆಕ್ಸ್ಟ್ ಬಯಲಿಗೆಳೆದಿತ್ತು. ಈಗ ಆ ಖದೀಮರ ಟಾರ್ಗೆಟ್ ಆಗಿದ್ದ ಅಂಗಡಿಗಳ ಮಾಲೀಕರು ಏನು ಹೇಳ್ತಾರೆ ? ಹಾಗೂ ಸಂಸ್ಕಾರ ಫೌಂಡೇಶನ್ ಎಂದು ಹೇಳಿಕೊಂಡು ಬಂದಿದ್ದ ವ್ಯಕ್ತಿಗಳು ಏನೆಲ್ಲಾ ಅಂಗಡಿಕಾರರಿಗೆ ಕೇಳಿದ್ರು ? ಎಂಬುದನ್ನ ಅಂಗಡಿಗರರೇ ಹೇಳ್ತಾರೆ ಕೇಳಿ.
ಇನ್ನು ಈ ಬಗ್ಗೆ ನವಲಗುಂದ ತಹಶೀಲ್ದಾರ್ ಅನಿಲ ಬಡಿಗೇರ ಗಮನಕ್ಕೂ ಪಬ್ಲಿಕ್ ನೆಕ್ಸ್ಟ್ ತಂದಿತ್ತು. ಈಗ ನೇರವಾಗಿ ತಹಶೀಲ್ದಾರ್ ಅನಿಲ ಬಡಿಗೇರ ಅವರಿಗೆ ಆ ವ್ಯಕ್ತಿಗಳ ವಿರುದ್ಧ ಏನೆಲ್ಲಾ ಕ್ರಮ ಕೈಗೊಳ್ಳಲ್ಲಿದ್ದೀರಿ ಎಂದು ಕೇಳಿದಾಗ ಅವರು ಹೇಳಿದ್ದು ಹೀಗೆ.
ಅದೇನೇ ಇರಲಿ ಲೈಸೆನ್ಸ್ ಕೊಡಿಸುವುದಾಗಿ ನವಲಗುಂದ ಪುರಸಭೆ ಅಥವಾ ತಾಲೂಕಾ ಆಡಳಿತದ ಪರವಾನಿಗೆ ಪಡೆಯದೇ ಪಟ್ಟಣದಲ್ಲಿ ಎಂಟ್ರಿ ಕೊಟ್ಟ ಇಂತವರಿಂದ ಈಗಾಗಲೇ ಹಲವಾರು ಜನ ಮೋಸ ಹೋಗಿದ್ದಾರೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಇಂತಹ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ತಾಲೂಕಾ ದಂಡಾಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕಿದೆ.
-ವಿನೋದ್ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ.
Kshetra Samachara
13/04/2022 04:26 pm