ಧಾರವಾಡ: ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ನಿಯಮ ಬಾಹಿರವಾಗಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂಬ ತಕರಾರು ಅರ್ಜಿ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಅಧಿಸೂಚನೆಯನ್ನು ರದ್ದುಗೊಳಿಸಿ ಹೈಕೋರ್ಟ್ ಆದೇಶಿಸಿದೆ.
ಕೃಷಿ ವಿವಿಯಲ್ಲಿನ ಕುಲಸಚಿವ, ಆಡಳಿತಾಧಿಕಾರಿ, ಸಂಶೋಧನಾ ನಿರ್ದೇಶಕ, ವಿಸ್ತರಣಾ ನಿರ್ದೇಶಕ, ಆಸ್ತಿ ಅಧಿಕಾರಿ, ಡೀನ್‌ಗಳ ನೇಮಕಾತಿಯಲ್ಲಿ ಜೇಷ್ಠತೆ ಮತ್ತಿತರ ನಿಯಮಗಳನ್ನು ಪಾಲಿಸದ ವಿವಿಯ ಕ್ರಮ ಪ್ರಶ್ನಿಸಿ ಡಾ.ರಾಮನಗೌಡ ಪಾಟೀಲ ಮತ್ತು ಶಿಕ್ಷಕರ ಕಲ್ಯಾಣ ಸಂಘದ ವತಿಯಿಂದ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಅರ್ಜಿದಾರರ ವಾದ ಪುರಸ್ಕರಿಸಿ, ಆಡಳಿತ ಮಂಡಳಿ ಅಂಗೀಕರಿಸಿದ ನಿಯಮಗಳನ್ವಯ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಯಾವುದೇ ನಿಯಮಗಳನ್ನು ಪಾಲಿಸದೇ ಕುಲಪತಿಯವರು ಹೊರಡಿಸಿದ ಅಧಿಸೂಚನೆ ಸರಿಯಲ್ಲ ಎಂದು ಅಭಿಪ್ರಾಯಪಟ್ಟಿತು. ಬಳಿಕ ಪ್ರಸ್ತುತ ಅಧಿಸೂಚನೆಯನ್ನು ರದ್ದುಗೊಳಿಸಿತು. ನಂತರ ಹೊಸ ಅಧಿಸೂಚನೆ ಹೊರಡಿಸಿ ನಿಯಮಾವಳಿಯಂತೆ ನೇಮಕಾತಿ ಮಾಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದೆ.
Kshetra Samachara
24/12/2021 09:21 am