ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲೋಕ್ ಅದಾತ್‌ನಲ್ಲಿ 15131 ಪ್ರಕರಣಗಳ ಇತ್ಯರ್ಥ: 19 ಕೋಟಿ ಮೊತ್ತ ವಸೂಲು

ಧಾರವಾಡ: ಇಂದು ಮೆಘಾ ಲೋಕ್ ಅದಾಲತ್‍ನ್ನು ಧಾರವಾಡ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಆಯೋಜಿಸಲಾಗಿತ್ತು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಉಮೇಶ್ ಎಂ.ಅಡಿಗ ಅವರ ಮಾರ್ಗದರ್ಶನದಲ್ಲಿ ಇಂದಿನ ಲೋಕ್‍ಆದಾಲತ್‍ಗಾಗಿ ಧಾರವಾಡದಲ್ಲಿ 12 ಪೀಠಗಳನ್ನು, ಹುಬ್ಬಳ್ಳಿಯಲ್ಲಿ 16 ಪೀಠಗಳನ್ನು, ಕುಂದಗೋಳ, ನವಲಗುಂದ ಮತ್ತು ಕಲಘಟಗಿಯಲ್ಲಿ ತಲಾ 02 ಪೀಠವನ್ನು ಹೀಗೆ ಒಟ್ಟು 34 ಪೀಠಗಳನ್ನು ಸ್ಥಾಪಿಸಲಾಗಿತ್ತು.

ವಿವಿಧ ರೀತಿಯ ಸುಮಾರು 20,573 ಕ್ಕಿಂತ ಹೆಚ್ಚು ಪ್ರಕರಣಗಳನ್ನು ಇಂದಿನ ಲೋಕ್‍ ಅದಾಲತ್‍ಗಾಗಿ ತೆಗೆದುಕೊಂಡು ಅವುಗಳ ಪೈಕಿ 14946 ಚಾಲ್ತಿ ಇರುವ ಪ್ರಕರಣಗಳನ್ನು ಹಾಗೂ 185 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜೀ ಸಂಧಾನ ಮಾಡಿಸಲಾಯಿತು. ಸುಮಾರು 19 ಕೋಟಿಗಿಂತ ಹೆಚ್ಚು ಮೊತ್ತವನ್ನು ವಸೂಲು ಮಾಡಲಾಯಿತು.

ಈ ಲೋಕ್ ಅದಾಲತ್‍ನಲ್ಲಿ ಧಾರವಾಡ ಜಿಲ್ಲೆಯ ಎಲ್ಲ ನ್ಯಾಯಾಧೀಶರು, ವಿವಿಧ ವಿಮೆ ಕಂಪೆನಿಯ ಅಧಿಕಾರಿಗಳು, ವಿಮೆ ಕಂಪೆನಿಯ ಪ್ಯಾನಲ್ ವಕೀಲರುಗಳು, ಎನ್.ಡಬ್ಲೂ.ಕೆ.ಆರ್.ಟಿ.ಸಿ. ಅಧಿಕಾರಿಗಳು, ಅರ್ಜಿದಾರರ ಪರ ವಕೀಲರುಗಳು, ಕಕ್ಷಿದಾರರು ಭಾಗವಹಿಸಿ ಈ ಮೆಘಾ-ಲೋಕ ಅದಾಲತ್‍ನ್ನು ಯಶಸ್ವಿಗೊಳಿಸಿದ್ದಾರೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪುಷ್ಪಲತಾ.ಸಿ.ಎಂ ಅವರು ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

14/08/2021 10:08 pm

Cinque Terre

12.25 K

Cinque Terre

0

ಸಂಬಂಧಿತ ಸುದ್ದಿ