ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾರ್ಕಿಂಗ್ ವಿಷಯಕ್ಕೆ ಕೊಲೆ ಮಾಡಿದ ಮೂವರಿಗೆ ಹತ್ತು ವರ್ಷ ಜೈಲು...!

ಹುಬ್ಬಳ್ಳಿ: ಪಾರ್ಕಿಂಗ್ ವಿಷಯಕ್ಕೆ ಜಗಳವಾಡಿ ಉತ್ತಮ ಬೊಂಗಾಳೆ ಎಂಬುವರನ್ನು ಕೊಲೆ ಮಾಡಿದ ಮೂವರು ಅಪರಾಧಿಗಳಿಗೆ, ಇಲ್ಲಿನ ಐದನೇ ಹೆಚ್ಚುವರಿ ಮತ್ತು ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಹತ್ತು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ 75 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ಹೌದು..ಕ್ಲಬ್ ರಸ್ತೆಯ ರೈಲ್ವೆ ಮೈದಾನದ ಪಾರ್ಕಿಂಗ್ ಬಳಿ, 2019ರ ಜನವರಿ 13ರಂದು ಬೈಕ್ ನಿಲ್ಲಿಸುವ ವಿಚಾರಕ್ಕೆ ಅಪರಾಧಿಗಳಾದ ಸುನೀಲ ಚಂದಯ್ಯ, ಸನ್ನಿ ಹಾಗೂ ಮೈಕಲ್ ಮತ್ತು ಬೊಂಗಾಳೆ ಜತೆ ಜಗಳ ನಡೆದಿತ್ತು. ಆಗ ಮೂವರೂ ಬೊಂಗಾಳೆ ಅವರಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು. ಇನ್ನೂ ಪ್ರಕರಣ ದಾಖಲಿಸಿಕೊಂಡ ಕೇಶ್ವಾಪುರ ಠಾಣೆ ಪೊಲೀಸರು ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಕೆ.ಎನ್. ಗಂಗಾಧರ ಅವರು ಅಪರಾಧಿಗಳಿಗೆ ಶಿಕ್ಷೆ ಪ್ರಕಟಿಸಿದರು. ದಂಡದ ಒಟ್ಟು ಮೊತ್ತ 2.25 ಲಕ್ಷದ ಪೈಕಿ, ಮೃತರ ಪತ್ನಿಗೆ 2 ಲಕ್ಷ ಹಾಗೂ ಉಳಿದ 25 ಸಾವಿರವನ್ನು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನೀಡಬೇಕು ಎಂದು ಆದೇಶಿಸಿದ್ದು,ಸರ್ಕಾರದ ಪರವಾಗಿ ಸುಮಿತ್ರಾ ಎಂ. ಅಂಚಟಗೇರಿ ಅವರು ವಾದ ಮಂಡಿಸಿದ್ದರು.

Edited By : Nirmala Aralikatti
Kshetra Samachara

Kshetra Samachara

31/07/2021 03:42 pm

Cinque Terre

26.75 K

Cinque Terre

0

ಸಂಬಂಧಿತ ಸುದ್ದಿ