ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಸಂತೆಯಲ್ಲಿ ಹೆಚ್ಚಿದ ಕಳ್ಳತನಕ್ಕೆ ಪೊಲೀಸ್ ಬ್ರೇಕ್

ಕುಂದಗೋಳ: ಪಟ್ಟಣದಲ್ಲಿ ವಾರದ ಪ್ರತಿ ಬುಧವಾರ ನಡೆಯುವ ಸಂತೆಯಲ್ಲಿ ಮೊಬೈಲ್, ದ್ವಿಚಕ್ರ ವಾಹನ ಸೇರಿದಂತೆ ಅನೇಕ ವಸ್ತುಗಳು ಕಳ್ಳತನ ಆಗುತ್ತಿರುವ ಬಗ್ಗೆ ಪಬ್ಲಿಕ್ ನೆಕ್ಸ್ಟ್ ಕಳೆದ ವಾರ ಸುದ್ದಿ ಪ್ರಕಟಿಸಿ ಪೊಲೀಸ್ ಅಧಿಕಾರಿಗಳ ಗಮನ ಸೆಳೆದಿತ್ತು.

ಈ ಬಗ್ಗೆ ಕುಂದಗೋಳ ಗ್ರಾಮೀಣ ಪೊಲೀಸ್ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿದ್ದು, ಇಂದು ಸ್ವತಃ ಪೊಲೀಸರು ಸಂತೆಗೆ ಆಗಮಿಸಿ ಕಳ್ಳರ ಬೇಟೆಗೆ ಮುಂದಾಗಿದ್ದಲ್ಲದೆ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಓರ್ವ ಎಎಸ್ಐ ಹಾಗೂ ಹೆಡ್ ಕಾನ್ಸ್‌ಟೇಬಲ್ ಜನರಲ್ಲಿ ಜಾಗೃತಿ ಜೊತೆ ಕಳ್ಳರ ಬೇಟೆಗೆ ಸಜ್ಜಾಗಿದ್ದರೇ, ಇಬ್ಬರೂ ಪೊಲೀಸ್ ಪೇದೆ ಮಪ್ತಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಒಟ್ಟಾರೆ ಗ್ರಾಮೀಣ ಭಾಗದ ಜನರನ್ನೇ ಗುರಿಯಾಗಿಸಿದ ಕಳ್ಳರ ಕಾಟಕ್ಕೆ ಪೊಲೀಸರು ಮುಕ್ತಿ ಕೊಟ್ರೇ ಸಾಕು ಎನ್ನುತ್ತಾರೆ ಸಾರ್ವಜನಿಕರು.

ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ : ಶ್ರೀಧರ ಪೂಜಾರ

Edited By : Manjunath H D
Kshetra Samachara

Kshetra Samachara

10/02/2021 08:45 pm

Cinque Terre

63.27 K

Cinque Terre

1

ಸಂಬಂಧಿತ ಸುದ್ದಿ