ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಾರ್ ವ್ಹೀಲ್ ಲಾಕ್ ನಿಂದ ಹೈರಾಣಾದ ವಾಹನ ಸವಾರರು

ಹುಬ್ಬಳ್ಳಿ: ನಡು ರಸ್ತೆಯಲ್ಲಿ ‌ಕಾರು‌ ನಿಲ್ಲಿಸಿದ ಕಾರು ಚಾಲಕನಿಗೆ ಪೊಲೀಸರು ಬಿಸಿ ಮುಟ್ಟಿಸಿದ ಘಟನೆ ಕೊಪ್ಪಿಕರ ರಸ್ತೆಯಲ್ಲಿ ನಡೆದಿದೆ.

ನಡು ರಸ್ತೆಯಲ್ಲಿ ಕಾರಿನ ವ್ಹೀಲ್ ಲಾಕ್ ಮಾಡಿದ್ದರಿಂದ, ಜನರು ವಾಹನ ದಟ್ಟಣೆಯಿಂದ ಕೂಡಿದ ಕೊಪ್ಪಿಕರ್ ರಸ್ತೆಯಲ್ಲಿ ಅರ್ಧ ಗಂಟೆಗಳ ಕಾಲ ವಾಹನ ಸಂಚಾರಕ್ಕೆ ವ್ಯತ್ಯಯವಾಗಿತ್ತು.

ಆದ್ರೆ ಕಾರು ಚಾಲಕನಿಗೆ ಬಿಸಿ ಮುಟ್ಟಿಸುವ ಭರದಲ್ಲಿ ಸಾರ್ವಜನಿಕರಿಗೂ‌ ಬಿಸಿ ತಟ್ಟಿತ್ತು. ಟ್ರಾಫಿಕ್ ಜಾಮ್ ಆಗಿ ಪೊಲೀಸ್ ಲಾಕ್ ನಿಂದ ಎಲ್ಲರೂ ಹೈರಾಣಾಗಿ ಹೋಗಿದ್ದರು. ನಡುರಸ್ತೆಯಲ್ಲೇ ಕಾರು ನಿಲ್ಲಿಸಿದ್ದರಿಂದ ಪರಸ್ಥಿತಿ ಹದಗೆಡುವುದನ್ನು ಅರಿತ ಪೊಲೀಸರು ಸ್ಥಳಕ್ಕೆ ಬಂದು ಲಾಕ್ ತಗೆದರು. ಕಾರಿನ ಅನ್ ಲಾಕ್ ನಂತರವೇ ಸಂಚಾರ ಸುಗಮವಾಯಿತು. ಸಾರ್ವಜನಿಕರು ಕಾರು ಚಾಲಕನಿಗೆ ಹಿಡಿಶಾಪ ಹಾಕಿದರು...

Edited By : Manjunath H D
Kshetra Samachara

Kshetra Samachara

09/02/2021 09:43 pm

Cinque Terre

68.85 K

Cinque Terre

10

ಸಂಬಂಧಿತ ಸುದ್ದಿ