ಕುಂದಗೋಳ: 'ದೇವದಾಸಿ ಸಮರ್ಪಣಾ ನಿಷೇಧ ಕಾಯ್ದೆ', 'ಕೌಟುಂಬಿಕ ದೌರ್ಜನ್ಯ ಕಾಯ್ದೆ' ಇವುಗಳ ಕುರಿತಂತೆ ಸವಿಸ್ತಾರವಾಗಿ ಹಿರಿಯ ನ್ಯಾಯಾಧೀಶರಾದ ಹಾಗೂ ತಾಲೂಕು ಕಾನೂನು ಸೇವಾ ಅಧ್ಯಕ್ಷೆ ಶೈನಿ.ಕೆ.ಎಮ್ ಮಾಹಿತಿ ನೀಡಿದರು.
ಪಟ್ಟಣದ ವಿವಿಧ ಇಲಾ ಸಂಕೀರ್ಣ ಕಟ್ಟಡದಲ್ಲಿ ಆಯೋಜಿಸಿದ್ದ ಮಾಜಿ ದೇವದಾಸಿ ಹಾಗೂ ಇತರೆ ಮಹಿಳೆಯರಿಗೆ ಕಾನೂನು ಸೇವಾ ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು, ಸಭೆಯಲ್ಲಿ ಭಾಗವಹಿಸಿದ ಮಹಿಳೆಯರಿಗೆ ದೇವದಾಸಿ ಸಮರ್ಪಣಾ ನಿಷೇಧ ಕಾಯ್ದೆಯಿಂದಾಗುವ ಪರಿಣಾಮ ಹಾಗೂ ಮೂಢನಂಬಿಕೆಗಳ ಬಗ್ಗೆ ತಿಳಿಸಿದರು.
ದೇವಾದಾಸಿ ಪದ್ದತಿ ಕುರಿತು ಸಿವಿಲ್ ನ್ಯಾಯಾಧೀಶರಾದ ರವಿ ಬಾಬು ಚೌಹಾಣ್ ಭಿತ್ತಿಪತ್ರ ಬಿಡುಗಡೆಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಡಿಪಿಓ ಅನ್ನಪೂರ್ಣ ಸಂಗಳದ ವಹಿಸಿದ್ದರು, ದೇವದಾಸಿ ಪುನರ್ವಸತಿ ಯೋಜನೆ ನೋಡಲ್ ಅಧಿಕಾರಿ ಬಿ.ಆರ್.ಮಧುಸೂದನ್ ನ್ಯಾಯವಾದಿ ವಾಯ್.ಜಿ.ಬಿಳೇಬಾಳ, ಪಿ.ಪಿ.ಕೋಕಾಟೆ ನ್ಯಾಯವಾದಿಗಳು, ದೇವದಾಸಿ ಪದ್ಧತಿ ನಿಷೇಧ ಕುರಿತು ಎನ್.ಮಾಯ್.ಪಾಟೀಲ ಮಹಿಳೆಯರಿಗೆ ಅರಿವು ಮೂಡಿಸಿದರು.
Kshetra Samachara
06/02/2021 05:03 pm