ಧಾರವಾಡ: ಬ್ರಿಟನ್ ನಿಂದ ಧಾರವಾಡ ಜಿಲ್ಲೆಗೆ ಮತ್ತೆ 10 ಜನ ಆಗಮಿಸಿದ್ದು, ಅದರಲ್ಲಿ ಏಳು ಜನರನ್ನು ತಪಾಸಣೆ ಮಾಡಲಾಗಿದೆ. ಅವರ ವರದಿ ನೆಗೆಟಿವ್ ಎಂದು ಬಂದಿದೆ. ಇನ್ನುಳಿದ 3 ಜನರಿಗಾಗಿ ಶೋಧ ನಡೆದಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.
ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಇನ್ನುಳಿದ ಮೂವರನ್ನು ಪತ್ತೆ ಮಾಡಿ ಅವರನ್ನೂ ತಪಾಸಣೆಗೊಳಪಡಿಸಲಾಗುವುದು. ಮೊನ್ನೆ ಬ್ರಿಟನ್ ನಿಂದ ಬಂದು ನಾಪತ್ತೆಯಾಗಿದ್ದ ವ್ಯಕ್ತಿ ಕಲಬುರ್ಗಿಯಲ್ಲಿದ್ದಾರೆ. ಅವರನ್ನು ಅಲ್ಲೇ ತಪಾಸಣೆಗೊಳಪಡಿಸಲು ಅಲ್ಲಿನ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿದೆ ಎಂದರು.
ಗ್ರಾಮ ಪಂಚಾಯ್ತಿ ಚುನಾವಣಾ ಮತ ಎಣಿಕೆ ಶಾಂತಿಯುತವಾಗಿ ನಡೆಯುತ್ತಿದೆ. 3 ಸುತ್ತುಗಳಲ್ಲಿ ಮತ ಎಣಿಕೆ ನಡೆಯುತ್ತಿದೆ. ಈಗಾಗಲೇ ಮೊದಲ ಹಂತದ ಮತ ಎಣಿಕೆ ಮುಕ್ತಾಯದ ಹಂತ ತಲುಪಿದೆ. ಸಂಜೆ 6 ಗಂಟೆಯೊಳಗೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಮತ ಎಣಿಕೆ ಮುಕ್ತಾಯಗೊಳ್ಳಲಿದೆ ಎಂದರು.
Kshetra Samachara
30/12/2020 10:58 am