ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಹಿಜಾಬ್ ವಿವಾದ ಬೇಡ, ಶಾಂತಿ ಸುವ್ಯವಸ್ಥೆ ಕಾಪಾಡೋಣ: ಸಿಪಿಐ ದೇಶನೂರ

ಕುಂದಗೋಳ : ಕರಾವಳಿ ಭಾಗದಲ್ಲಿ ಭುಗಿಲೆದ್ದ ಹಿಜಾಬ್ ವಿವಾದದ ಬಗ್ಗೆ ಸರ್ಕಾರ ಹಾಗೂ ಹೈಕೋರ್ಟ್ ಸೂಕ್ತ ಕ್ರಮ ಹಾಗೂ ಆದೇಶ ನೀಡುವ ನಿಟ್ಟಿನಲ್ಲಿ ಆಲೋಚನೆ ನಡೆಸುತ್ತಿದೆ. ಸದ್ಯ ಹೈಕೋರ್ಟ್ ಮಧ್ಯಂತರ ಆದೇಶ ಜಾರಿಯಲ್ಲಿರುವ ಕಾರಣ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವುದು ನಮ್ಮ ಮುಖ್ಯ ಕರ್ತವ್ಯ ಎಂದು ಸಿಪಿಐ ಎನ್.ಎಮ್ ದೇಶನೂರ ಹೇಳಿದರು.

ಅವರು ಕುಂದಗೋಳ ತಾಲೂಕಿನ ಸಂಶಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸ್ಥಳೀಯರ ಶಾಂತಿ ಸಭೆ ಕರೆದು ಮಾತನಾಡಿ "ಶಾಂತಿ ಸುವ್ಯವಸ್ಥೆ ಸೌಹಾರ್ದತೆಗೆ ಹೆಸರಾದ ಸಂಶಿ ಹಾಗೂ ಹಳ್ಳಿಗಳಲ್ಲಿ ಅಶಾಂತಿ ಕದಲುವುದು ಬೇಡ" ಹಿಜಾಬ್ ವಿವಾದ ನಮ್ಮಲ್ಲಿ ವ್ಯಾಪಿಸಿದಂತೆ ಜಾಗೃತಿ ವಹಿಸೋಣ ಎಂದರು.

ಪೊಲೀಸ್ ಇಲಾಖೆ ನಿರ್ದೇಶನದಂತೆ ಶಾಂತಿ ಸಭೆ ಕರೆದಿದ್ದೇವೆ. ಸಂಶಿ ಬೃಹತ್ ಹೋಬಳಿ ಗ್ರಾಮ ಇಲ್ಲಿ ಹಾಗೂ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಸರ್ವ ಸದಸ್ಯರು ನೇತೃತ್ವದಲ್ಲಿ ಸಾರ್ವಜನಿಕರಿಗೆ ಮನವಿ ಮಾಡಿದರು

Edited By : Manjunath H D
Kshetra Samachara

Kshetra Samachara

17/02/2022 04:08 pm

Cinque Terre

19.43 K

Cinque Terre

0

ಸಂಬಂಧಿತ ಸುದ್ದಿ