ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹಿಂಸೆಗೆ ಹಿಂಸೆಯೇ ಉತ್ತರವಲ್ಲ; ಎಸ್.ಆರ್.ಹಿರೇಮಠ

ಹುಬ್ಬಳ್ಳಿ: ರಾಜಸ್ಥಾನದ ಉದಯಪುರದ ಹತ್ಯೆ ಪ್ರಕರಣ ನಿಜಕ್ಕೂ ಹೀನ ಕೃತ್ಯವಾಗಿದೆ. ದೇಶದಲ್ಲಿ ಉತ್ಕೃಷ್ಟ ಸಂವಿಧಾನವಿದೆ. ಒಬ್ಬರ ಕಣ್ಣು ತೆಗೆದರೇ ಮತ್ತೊಬ್ಬರ ಕಣ್ಣು ತೆಗೆಯುವಂತ ಹೀನ ಕೃತ್ಯಕ್ಕೆ ಇಳಿಯಬಾರದು ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾವುದೇ ಕೃತ್ಯಗಳಿಗೆ ಕೃತ್ಯದ ಮೂಲಕವೇ ಉತ್ತರ ಕೊಡುವಂತ ಪರಿಸ್ಥಿತಿಯನ್ನು ಬೇರು ಸಮೇತ ಕಿತ್ತೊಗೆಯಬೇಕು. ಅಲ್ಲದೇ ಕಾನೂನು ಪ್ರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೆತ್ತಿಕೊಳ್ಳಬೇಕು ಎಂದರು.

ಇನ್ನೂ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವ ಸದುದ್ದೇಶದಿಂದ ಹಾಗೂ ಜನರಿಗೆ ಅರಿವನ್ನು ಮುಟ್ಟಿಸುವ ಸದುದ್ದೇಶದಿಂದ ಜನಾಂದೋಲನ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ದೈತ್ಯಾಕಾರದ ಲಾಭಕೋರ ಕಂಪನಿಗಳ ವಶಕ್ಕೆ ಕೃಷಿ ಮತ್ತು ಕೃಷಿಕರು ಸಿಲುಕಿಕೊಂಡಿದ್ದು, ಇಂತಹ ಅವ್ಯವಸ್ಥೆ ಸರಿಪಡಿಸಲು ಸೂಕ್ತ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

Edited By : Somashekar
Kshetra Samachara

Kshetra Samachara

29/06/2022 06:09 pm

Cinque Terre

37 K

Cinque Terre

3

ಸಂಬಂಧಿತ ಸುದ್ದಿ