ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಅವಾಂತರ; ಕಾರುಗಳ ಮೇಲೆ ಬಿದ್ದ ಮರ, ಗ್ಯಾರೇಜ್‌ ಮಾಲೀಕ ದುಃಖತಪ್ತ!

ಹುಬ್ಬಳ್ಳಿ: ಆತ ಬಡ ಕಾರು ಮೆಕ್ಯಾನಿಕ್. ಸಾಲ ಸೋಲ ಮಾಡಿ ಗ್ಯಾರೇಜ್‌ ಹಾಕಿ ಕೊಂಡಿದ್ದ. ಆದರೆ, ಮೊನ್ನೆ ನಗರದಲ್ಲಿ ಸುರಿದ ಭಾರಿ ಗಾಳಿ-ಮಳೆ ಅವಾಂತರದಿಂದಾಗಿ ಆತ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಅಷ್ಟಕ್ಕೂ ಅಲ್ಲಿ ಏನು ನಡೆಯಿತು ತಿಳಿಯೋಣ ಬನ್ನಿ...

ಹೌದು... ಹೀಗೆ ಕೈಯಲ್ಲಿ ಪೋಟೊ ಹಿಡಿದುಕೊಂಡು ʼದುಸ್ಥಿತಿʼ ಬಗ್ಗೆ ತಿಳಿಸುತ್ತಿರುವ ಈತನ ಹೆಸರು ಆರೂಡ ವಾಂಜರೆ. ಗೋಕುಲ್ ರಸ್ತೆಯಲ್ಲಿನ ರವಿನಗರದಲ್ಲಿ ಸಾಲ ಮಾಡಿ ಕಾರಿನ ಗ್ಯಾರೇಜ್ ಹಾಕಿ ಉತ್ತಮ ಜೀವನವನ್ನೇ ಸಾಗಿಸುತ್ತಿದ್ದ. ಆದರೆ, ಜೋರುಗಾಳಿ, ಬಿರುಮಳೆಗೆ ಬೃಹತ್‌ ಮರವೊಂದು ಗ್ಯಾರೇಜ್ ಮುಂದೆ ನಿಲ್ಲಿಸಿದ್ದ ಗ್ರಾಹಕರ ಕಾರುಗಳ ಮೇಲೆಯೇ ಬಿದ್ದು 9 ಕಾರುಗಳು ನಜ್ಜುಗುಜ್ಜಾಗಿವೆ! ಈ ಅನಾಹುತಕ್ಕೆ ಸ್ಮಾರ್ಟ್ ಸಿಟಿ ಯೋಜನೆಯೇ ಕಾರಣವೆಂದು ದೂರಿದ ಅವರು, ಘಟನೆ ವಿವರಿಸಿದರು.

" ಕೆಲ ತಿಂಗಳ ಹಿಂದೆ ಸ್ಮಾರ್ಟ್ ಸಿಟಿ ಯೋಜನೆಯಡಿ ಗ್ಯಾರೇಜ್ ಪಕ್ಕದಲ್ಲೇ ಇದ್ದ ದೊಡ್ಡಮರದ ಬಳಿ ಕಾಲುವೆ ತೋಡಲಾಗಿತ್ತು. ಮೊನ್ನೆ ಬೀಸಿದ ಬಿರುಗಾಳಿ- ಮಳೆಗೆ ಸಿಲುಕಿ ಆ ಮರ, ಗ್ಯಾರೇಜ್ ಮೇಲಿನಿಂದ ನೆಲಕ್ಕುರುಳಿದೆ. ಪರಿಣಾಮ ಗ್ರಾಹಕರ ಕಾರುಗಳು ಸಂಪೂರ್ಣ ಜಖಂಗೊಂಡು ಬರೋಬ್ಬರಿ 9 ಲಕ್ಷದಷ್ಟು ನಷ್ಟವಾಗಿದೆ. ಕಾಲುವೆ ತೋಡದಿದ್ದರೆ ಹೀಗಾಗುತ್ತಿರಲಿಲ್ಲ. ಕಾಲುವೆ ಅವೈಜ್ಞಾನಿಕವಾಗಿ ತೋಡಿದ್ದರಿಂದ ಮರದ ಬೇರುಗಳು ಸಡಿಲಗೊಂಡು ಈ ಅವಘಡ ಸಂಭವಿಸಿದೆ. ಘಟನೆ ಬಗ್ಗೆ ಸ್ಮಾರ್ಟ್ ಸಿಟಿ ಅಧಿಕಾರಿಗಳನ್ನು ಕೇಳಿದ್ರೇ ಬಿಡಿಗಾಸು ಕೊಡಲು ಬಂದಿದ್ದಾರೆ" ಎಂದು ಅಳಲು ತೋಡಿಕೊಂಡರು.

Edited By :
Kshetra Samachara

Kshetra Samachara

07/05/2022 04:03 pm

Cinque Terre

22.77 K

Cinque Terre

8

ಸಂಬಂಧಿತ ಸುದ್ದಿ