ಧಾರವಾಡ: ಮಸೀದಿಗಳ ಮೇಲೆ ಹಾಕಲಾಗಿರುವ ಧ್ವನಿ ವರ್ಧಕಗಳ ವಿರುದ್ಧ ಸಮರ ಸಾರಿ, ಮೇ.9 ರಿಂದ ಹಿಂದೂ ದೇವಾಲಯಗಳಲ್ಲೂ ಸುಪ್ರಭಾತ ಮೊಳಗಿಸಲು ಕರೆ ನೀಡಿದ್ದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರಿಗೆ ಯಶಸ್ಸು ಸಿಕ್ಕಂತಾಗಿದೆ.
ನಿನ್ನೆಯಿಂದ ರಾಜ್ಯದಾದ್ಯಂತ ಹಿಂದೂ ದೇವಾಲಯಗಳಲ್ಲೂ ಸುಪ್ರಭಾತ ಮೊಳಗಿಸಲು ಚಾಲನೆ ನೀಡಲಾಗಿತ್ತು. ಇದರಿಂದ ಎಚ್ಚೆತ್ತ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಎಲ್ಲೆಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿ ವರ್ಧಕಗಳು ಬಳಕೆಯಾಗುತ್ತಿವೆಯೋ ಅವರೆಲ್ಲರೂ ಪರವಾನಗಿ ಪಡೆಯಬೇಕು ಹಾಗೂ ಇಂತಿಷ್ಟೆ ಡೆಸಿಬಲ್ ಶಬ್ದ ಇರಬೇಕು ಎಂದು ನೋಟಿಫಿಕೇಶನ್ ಜಾರಿ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಜೊತೆ ನಮ್ಮ ಪ್ರತಿನಿಧಿ ಪ್ರವೀಣ ಓಂಕಾರಿ ನಡೆಸಿರುವ ಮಾತುಕತೆ ಇಲ್ಲಿದೆ ನೋಡಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
10/05/2022 06:56 pm