ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹಸಿ ಕಸ, ಒಣ ಕಸ ಬೇರ್ಪಡಿಸಿ ಕೊಡಿ : ಮಹಾನಗರ ಪಾಲಿಕೆ ವಿನೂತನ ನಿರ್ಧಾರ

ಹುಬ್ಬಳ್ಳಿ: ಹು-ಧಾ ಮಹಾನಗರದಲ್ಲಿ ತ್ಯಾಜ್ಯ ವಿಲೇವಾರಿ ಒಂದು ದೊಡ್ಡ ತಲೆನೋವಾಗಿ ಪರಿಣಮಿಸಿತ್ತು.ಹು-ಧಾ ಮಹಾನಗರ ಪಾಲಿಕೆ ಹತ್ತು ಹಲವಾರು ಯೋಜನೆ ಜಾರಿಗೆ ತರುವ ಮೂಲಕ ತ್ಯಾಜ್ಯ ವಿಲೇವಾರಿಗೆ ಸಮರ್ಪಕ ಮಾರ್ಗ ಕಂಡುಕೊಂಡಿದ್ದು,ಈಗ ಇನ್ನೊಂದು ನಿರ್ಧಾರವನ್ನು ಹು-ಧಾ ಮಹಾನಗರ ಪಾಲಿಕೆ ಕೈಗೆತ್ತಿಕೊಂಡಿದೆ.

ಹೌದು...ಹಸಿ ಮತ್ತು ಒಣ ಕಸ ವಿಂಗಡಣೆ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಮುಂದಾಗಿದ್ದು, ಘನ ತ್ಯಾಜ್ಯ ಸಮರ್ಪಕ ನಿರ್ವಹಣೆ, ಭೂಭರ್ತಿ (ಲ್ಯಾಂಡ್ ಫಿಲ್ಲಿಂಗ್) ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡುವುದು, ಪರಿಸರ ಸಂರಕ್ಷಣೆ ಹಾಗೂ ಮರು ಬಳಕೆಯ ವಸ್ತುಗಳನ್ನು ತ್ಯಾಜ್ಯದಿಂದ ವಿಂಗಡಿಸುವ ಉದ್ದೇಶವನ್ನು ಪಾಲಿಕೆ ಹೊಂದಿದೆ.

ಕಳೆದೆರಡು ವರ್ಷಗಳ ಹಿಂದೆಯೇ ಪಾಲಿಕೆ ಆಟೊ ಟಿಪ್ಪರ್ ಮೂಲಕ ಮನೆ–ಮನೆ ಕಸ ಸಂಗ್ರಹಣೆಗೆ ಚಾಲನೆ ನೀಡಿತ್ತು.ಆದರೆ ಆರಂಭಿಕ ಹಂತದಲ್ಲಿ ಕಸ ವಿಂಗಡಣೆ ಮಾಡಿದರೂ ಅದನ್ನು ಸಂಪನ್ಮೂಲವಾಗಿ ಪರಿವರ್ತಿಸುವ ಯೋಜನೆ ರೂಪುಗೊಂಡಿರಲಿಲ್ಲ. ಅಲ್ಲದೇ ಹಸಿ ಮತ್ತು ಒಣ ಕಸವನ್ನು ವಿಂಗಡಿಸಿ

ನೀಡಿದರೂ ಕಸ ಸಂಗ್ರಹಣೆ ವಾಹನ ಸಿಬ್ಬಂದಿ ಅದನ್ನು ಒಟ್ಟಾಗಿಯೇ ರಾಶಿ ಹಾಕುತ್ತಿದ್ದರು.ಇನ್ನೂ ಹಸಿ ಕಸ,ಒಣ ಕಸ ಹಾಗೂ ಪ್ಲಾಸ್ಟಿಕ್ ಸೇರಿಸಿಕೊಂಡು ಬಂದ ಟಿಪ್ಪರ್ ಚಾಲಕರು ಹಾಗೂ ಕಸ ಸಂಗ್ರಹಣ ಸಿಬ್ಬಂದಿಗೆ ದಂಡ ಹಾಕಲಾಗುತ್ತಿದೆ. ಹೀಗಾಗಿ ಅವರು ಕಡ್ಡಾಯವಾಗಿ ವಿಂಗಡಿಸಿದ ಕಸಮಾತ್ರ ಸಾಗಿಸುತ್ತಿದ್ದಾರೆ.

ಹಸಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸುವ ಧಾರವಾಡದ ವಿನ್ಡ್ರೋ ಕಂಪೋಸ್ಟಿಂಗ್ ಘಟಕ ಪ್ರಾಯೋಗಿಕವಾಗಿ ಕಾರ್ಯಾಚರಣೆ ಆರಂಭಿಸಿದೆ. ಹಸಿ ಕಸವನ್ನು ಪ್ರತ್ಯೇಕವಾಗಿ ಪಡೆಯುವ ಗಂಭೀರ ಪ್ರಯತ್ನ ಆರಂಭವಾಗಿದ್ದು,ಕಸವನ್ನು ವಿಂಗಡಿಸಿಯೇ ನೀಡುವಂತೆ ಸಂಗ್ರಹಣೆ ಸಿಬ್ಬಂದಿ ಈಗಾಗಲೇ ಜನರಿಗೆ ತಾಕೀತು ಮಾಡುತ್ತಿದ್ದಾರೆ.

Edited By :
Kshetra Samachara

Kshetra Samachara

15/10/2020 03:39 pm

Cinque Terre

26.55 K

Cinque Terre

9

ಸಂಬಂಧಿತ ಸುದ್ದಿ