ವೀಕ್ಷಕರ ವರದಿ
ಕುಂದಗೋಳ: ಪದವಿಪೂರ್ವ ಮಕ್ಕಳಿಗೆ ವಿದ್ಯಾಭ್ಯಾಸ ನೀಡಬೇಕಾದ ಕಾಲೇಜು ಸರಿಯಾದ ಸಮಯಕ್ಕೆ ಬಾಗಿಲು ತೆರೆಯುತಿಲ್ಲಾ ಎಂಬ ಆರೋಪ ಕೇಳಿ ಬಂದಿದೆ.
ಹೌದು ! ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು ಹಾಗೂ ಖಾಯಂ ಪ್ರಾಧ್ಯಾಪಕರು ಸರಿಯಾದ ಸಮಯಕ್ಕೆ ಬರೋದಿಲ್ಲಾ, ಇನ್ನೂ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಸರಿಯಾದ ಸಮಯಕ್ಕೆ ಆಗಮಿಸುವ ಅತಿಥಿ ಉಪನ್ಯಾಸಕರು, ಕಾಲೇಜು ಬೀಗ ಹಾಕಿದ ಪರಿಣಾಮ ಹೊರಗಡೆ ಕಾಯುವ ಪರಿಸ್ಥಿತಿ ಇದೆ ಎಂದು ಸ್ಥಳೀಯರು ಪಬ್ಲಿಕ್ ನೆಕ್ಸ್‌ಟ್‌ಗೆ ವೀಡಿಯೋ ಕಳುಹಿಸಿ ಮಾಹಿತಿ ನೀಡಿದ್ದಾರೆ.
ಇನ್ನೂ ಕೆಲ ಸಂದರ್ಭಗಳಲ್ಲಿ ಕಾಲೇಜು ಕೊಠಡಿ ಕೀಲಿ ಹಾಕಿದ ಕಾರಣ, ಕಾಲೇಜು ಅತಿಥಿ ಉಪನ್ಯಾಸಕರು ಆವರಣದಲ್ಲೇ ಬೋಧನೆ ಮಾಡಿದ್ದಾರೆಂದು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಸಂಬಂಧಪಟ್ಟ ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು, ಸ್ಥಳೀಯ ಶಾಸಕರು ಗಮನಿಸಿ ಸತ್ಯಾಂಶ ತಿಳಿಯಬೇಕಿದೆ.
Kshetra Samachara
02/07/2022 05:08 pm