ಹುಬ್ಬಳ್ಳಿ: ನಗರದ ಕೇಶ್ವಾಪುರದ ಕಾನ್ವೆಂಟ್ ಹೈಸ್ಕೂಲ್‌ಗೆ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಬಂದ ಹಿನ್ನೆಲೆಯಲ್ಲಿ, ಶಾಲೆ ಒಳಗೆ ಬಿಡಲು ಪೊಲೀಸರು ನಿರಾಕರಿಸಿದ್ದಾರೆ. ಈ ಕಾರಣಕ್ಕೆ ಪಾಲಕರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
ಶಾಲೆ ಒಳಗಡೆ ಹೋಗುವ ವೇಳೆ ಹಿಜಾಬ್ ತೆಗೆದು ಹೋಗಲು ಸೂಚಿಸಿದ್ದಾರೆ. ಜೊತೆಗೆ ಪಾಲಕರು ಸಹ ಮಕ್ಕಳನ್ನು ಭೇಟಿಯಾಗಲು ಬಂದಾಗ ಹಿಜಾಬ್ ಧರಿಸಬಾರದು ಎಂದು ಸೂಚಿಸಿದರು. ನಂತರ ಪೋಷಕರು ಎಸಿಪಿ ವಿನೋದ್ ಮುಕ್ತೇದಾರ್ ಜೊತೆ ಸಮಾಲೋಚನೆ ನಡೆಸಿದ್ದಾರೆ. ಅಂತಿಮವಾಗಿ ಶಾಲೆ ಪ್ರವೇಶಕ್ಕೆ ಅನುಮತಿ ಸಿಗದಿರುವಾಗ ಪೋಷಕರು ವಾಪಸ್ ಮನೆಗೆ ತೆರಳಿದ್ದಾರೆ.
Kshetra Samachara
14/02/2022 07:07 pm