ಧಾರವಾಡ: ರೌಡಿಶೀಟರ್ ಫ್ರೂಟ್ ಇರ್ಫಾನ್ ಕೊಲೆ ಪ್ರಕರಣದ ಆರೋಪಿ ಬಚ್ಚಾಖಾನ್ ನ್ನು ಇಂದು ಧಾರವಾಡದ ಕೇಂದ್ರ ಕಾರಾಗೃಹಕ್ಕೆ ರವಾನೆ ಮಾಡಲಾಗಿದೆ.
ಫ್ರೂಟ್ ಇರ್ಫಾನ್ ಕೊಲೆ ಸಂಬಂಧ ಪೊಲೀಸರು ಬಚ್ಚಾಖಾನ್ ನ್ನು ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದರು. ಇಂದು ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆ ಆತನನ್ನು ಮೈಸೂರು ಕೇಂದ್ರ ಕಾರಾಗೃಹಕ್ಕೆ ರವಾನೆ ಮಾಡಬೇಕಿತ್ತು.
ಆದರೆ, ಭದ್ರತೆ ದೃಷ್ಟಿಯಿಂದ ಇಂದು ರಾತ್ರಿ ಆತನನ್ನು ಧಾರವಾಡದ ಕೇಂದ್ರ ಕಾರಾಗೃಹದಲ್ಲಿರಿಸಿರುವ ಪೊಲೀಸರು, ನಾಳೆ ಮೈಸೂರು ಕಾರಾಗೃಹಕ್ಕೆ ರವಾನೆ ಮಾಡಲಿದ್ದಾರೆ.
Kshetra Samachara
23/09/2020 10:24 pm