ಧಾರವಾಡ: ಯೋಗೀಶಗೌಡ ಹತ್ಯೆ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಸುಪಾರಿ ಕೊಟ್ಟವರ ಪತ್ತೆಗೆ ಇನ್ನೂ ತನಿಖೆ ನಡೆಸುತ್ತಲೇ ಇದ್ದಾರೆ.
ನಿನ್ನೆಯಷ್ಟೆ ಹಲವರನ್ನು ವಿಚಾರಣೆಗೊಳಪಡಿಸಿದ್ದ ಸಿಬಿಐ ಅಧಿಕಾರಿಗಳು ಶುಕ್ರವಾರವೂ ಅದೇ ವ್ಯಕ್ತಿಗಳನ್ನು ಉಪನಗರ ಠಾಣೆಗೆ ಕರೆದು ವಿಚಾರಣೆ ನಡೆಸಿದರು.
ಯೋಗೀಶಗೌಡ ಪತ್ನಿ ಮಲ್ಲಮ್ಮ, ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ, ಆರೋಪಿಗಳ ಪರ ವಕೀಲ ಅಶೋಕ ಶಿಂಧೆ, ಕಾಂಗ್ರೆಸ್ ಮುಖಂಡ ಜಾಫರ್ ಹಾಗೂ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದ ಬಸವರಾಜ ಮುತ್ತಗಿ ಅವರು ಇಂದು ಸಿಬಿಐ ವಿಚಾರಣೆಗೆ ಹಾಜರಾದರು.
ಉಪನಗರ ಠಾಣೆಯಲ್ಲೇ ಬೀಡು ಬಿಟ್ಟಿರುವ ಸಿಬಿಐ ಅಧಿಕಾರಿಗಳು ಹಲವರನ್ನು ವಿಚಾರಣೆ ನಡೆಸಿ, ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.
ಎರಡನೇ ದಿನ ವಿಚಾರಣೆ ಮುಗಿಸಿ ಹೊರ ಬಂದ ಯೋಗೀಶಗೌಡ ಪತ್ನಿ ಮಲ್ಲಮ್ಮ, ನಮ್ಮ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಮಾಧ್ಯಮದವರ ವಿರುದ್ಧ ಹರಿಹಾಯ್ದ ಪ್ರಸಂಗ ಜರುಗಿತು.
Kshetra Samachara
18/09/2020 05:27 pm